
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನಲ್ಲಿ ಕೊಲೆ ಮಾಡಿ ಪೋಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಮತ್ತು ಗ್ಯಾಂಗ್ ಅನ್ನು ಇಂದು ಪ್ರತ್ಯೇಕವಾಗಿ ಬೇರೆ ಬೇರೆ ಜೈಲಿಗೆ ಕಳುಹಿಸಲು ಪೊಲೀಸರು ಚಿಂತನೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರೋ ದರ್ಶನ್ ಅಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿ ನಾಳೆ ಮುಗಿಯಲಿದ್ದು, ಇಂದು ಬಹುತೇಕ ಜೈಲು ಸೇರೋ ಸಾಧ್ಯತೆ ಇದೆ. ಪೊಲೀಸ್ ಮಹಜರು ಬಹುತೇಜ ಮುಗಿದಿದೆ. ನಾಳೆ ಭಾನುವಾರ ರಜೆ, ಸೋಮವಾರ ಬಕ್ರೀದ್ ಹಬ್ಬದ ಕಾರಣ ರಜೆ ಇರುವ ಹಿನ್ನೆಲೆ ಇಂದೇ ಜೈಲಿಗೆ ಕಳಿಸುವ ಸಾಧ್ಯತೆ ಇದೆ. ಡಿ ಟೀಮ್ ನಲ್ಲಿ ಇದುವರೆಗೂ 18ಜನ ಅರೆಸ್ಟ್ ಆಗಿದ್ದಾರೆ. ಒಟ್ಟು 19 ಜನರ ವಿರುದ್ಧ ಎಫ್‌ಐಆರ್ ಆಗಿದ್ದು, ಓರ್ವನ ಬಂಧನ ಬಾಕಿ ಇದೆ. ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಇಂದು ಈ ಬಗ್ಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಆರೋಪಿಗಳ ಪ್ರತ್ಯೇಕವಾಗಿ ಬೇರೆ ಜೈಲಿನಲ್ಲಿ ಇಡಲು ಪೊಲೀಸರು ಮನವಿ ಸಲ್ಲಿಸಲಿದ್ದಾರೆ. ಆರೋಪಿಗಳು ಒಂದೇ ಕಡೆ ಇದ್ರೆ ಪ್ರಕರಣದಿಂದ ಬಚಾವ್ ಆಗಲು ಒಂದಷ್ಟು ಪ್ಲಾನ್ ಮಾಡಬಹುದು. ಇಲ್ಲ ಅವರವರ ಮಧ್ಯೆ ಗಲಾಟೆಯಾಗೋ ಸಾಧ್ಯತೆಯಿದೆ. ಈ ಹಿನ್ನೆಲೆ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ.
ಇನ್ನು ಬೆಂಗಳೂರು ಪರಪ್ಪನ ಕಾರಗೃಹಕ್ಕೆ ನಟ ದರ್ಶನ್ ಶಿಫ್ಟ್ ಹಿನ್ನೆಲೆ ಸುಮಾರು 30 ರೌಡಿಗಳನ್ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಕೂಡ ಜೈಲು ಅಧಿಕಾರಿಳು ಚಿಂತನೆ ನಡೆಸಿದ್ದಾರೆ. ಜೈಲಿನಲ್ಲಿ ದರ್ಶನ್ ಆಪ್ತರಾಗಿರೊ ಕೆಲ ರೌಡಿ ಶೀಟರ್ ಗಳು ಇದ್ದಾರೆ. ಹೀಗಾಗಿ ಅವರ ಜೊತೆಗೆ ಸಂಪರ್ಕ ತಪ್ಪಿಸಲು ಬೇರೆ ಜೈಲಿಗೆ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರಂತೆ.
ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ದರ್ಶನ್ ಆಂಡ್ ಗ್ಯಾಂಗ್ ನ ವಿಚಾರಣೆ ಶುರುವಾಗಿದೆ. ಆರೋಪಿಗಳನ್ನ 9 ದಿನ ಕಸ್ಟಡಿಗೆ ಕೊಡುವಂತೆ ಪೊಲೀಸರ ಮನವಿ ಮಾಡಿದ್ದಾರೆ. ಅಲ್ಲದೇ,ಮತ್ತಷ್ಟು ಸಾಕ್ಷಿ ಕಲೆಹಾಕಲು ಸಮಯ ನೀಡುವಂತೆ ಜಡ್ಜ್ ಮುಂದೆ ಪೊಲೀಸರು ಮನವಿ ಮಾಡಿದ್ದಾರೆ.
ಇತ್ತ ಪೊಲೀಸರ ಪರ ವಾದ ಮಂಡಿಸ್ತಿರೋ ಪ್ರಸನ್ನಕುಮಾರ್ , ಪ್ರಕರಣದಲ್ಲಿ ಏನೇನು ಆಗಿದೆ ಮಾಹಿತಿ ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಈ ವೇಳೆ ಆರೋಪಿಗಳಿಗೆ ಚಿತ್ರಹಿಂಸೆ ನೀಡಿರುವುದಾಗಿ ದರ್ಶನ್ ಪರ ವಕೀಲ ಹೇಳಿದ್ದಾರೆ. ಹೌದು, ದರ್ಶನ್ ಹಾಗೂ ಪವಿತ್ರ ಗೌಡ ಬಿಟ್ಟು ಎಲ್ಲರಿಗೂ ಎಲೆಕ್ಟ್ರಿಕಲ್ ಶಾಕ್ ಕೊಟ್ಟಿದ್ದಾರೆ ಎಂದು
ದರ್ಶನ್ ಪರ ವಕೀಲ ಅನಿಲ್ ಬಾಬು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ಅತ್ತ ಪವಿತ್ರಾಗೌಡ ನೋವು ಅನುಭವಿಸ್ತಿದ್ದಾರೆ. 6 ದಿನ ವಿಚಾರಣೆ ನಡೆಸಿದ್ದಾರೆ ಅಂತಾ ಪವಿತ್ರಾಗೌಡ ಪರ ವಕೀಲ ನಾರಾಯಣಸ್ವಾಮಿ ವಾದ ಮಂಡಿಸುತ್ತಿದ್ದು, ನಟ ದರ್ಶನ್ ಪರ ವಕೀಲ ಅನಿಲ್ ಬಾಬು ವಾದ ಮಾಡುತ್ತಿದ್ದಾರೆ. ಇಬ್ಬರ ಪರ ವಕೀಲರ ವಾದವನ್ನು ಜಡ್ಜ್ ಆಲಿಸ್ತುತ್ತಿದ್ದಾರೆ