September 17, 2024

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶಶ್‌, ಆತನ ಗೆಳತಿ ಪವಿತ್ರಾ ಗೌಡ ಸೇರಿದಂತೆ ಇದುವರೆಗೆ ೧೮ ಜನರನ್ನು ಬಂಧಿಸಲಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಯನ್ನು ಬಂಧಿಸುವುದು ಸುಲಭದ ಕೆಲಸವಲ್ಲ. ಸಾಮಾನ್ಯವಾಗಿ ಸಾಕಷ್ಟು ರಾಜಕಾರಣಿಗಳ ಒತ್ತಡ ಇದ್ದೇ ಇರುತ್ತದೆ. ಹೀಗಾಗಿ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟನನ್ನು ಅರೆಸ್ಟ್ ಮಾಡಿದ ಆ ಪೊಲೀಸ್ ಅಧಿಕಾರಿ ಯಾರು? ಅನ್ನೋ ಪ್ರಶ್ನೆ ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲಿಯೂ ಮೂಡಿರುತ್ತದೆ. ಈ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ದರ್ಶನ್ ಆ್ಯಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಮರ್ಡರ್ ಕೇಸ್ ಸಂಬಂಧ ಕೆಲ ಟೆಕ್ನಿಕಲ್ ಎವಿಡೆನ್ಸ್ ಕಲೆಕ್ಟ್ ಮಾಡೋದ್ರಲ್ಲಿ ಪೊಲೀಸರು ಸಕ್ಸಸ್ ಆಗಿದ್ದಾರೆ.
ಸಿನಿಮಾ ಸ್ಟೈಲ್‌ನಲ್ಲಿ ಮರ್ಡರ್ ಅಗಿದ್ದು, ಸಿನಿಮಾ ಸ್ಟೈಲ್‌ನಲ್ಲಿಯೇ ಸಾಕ್ಷ್ಯ ಪತ್ತೆಯಾಗಿದೆ. ಇನ್ನು ಎಫ್ ಎಸ್ ಎಲ್ ಟೀಂ ಮೂಲಕ ಪೊಲಿಸರು ಕೊಲೆ ನಡೆದ ಸ್ಥಳದಲ್ಲಿ ಸ್ಯಾಂಪಲ್ ಕಲೆಕ್ಟ್ ಮಾಡಿದ್ದಾರೆ. ಅಲ್ಲದೇ, ಎಫ್ ಎಸ್ ಎಲ್ ಪರಿಶೀಲನೆ ವೇಳೆ ದರ್ಶನ್ ಟೀಂನಿಂದಲೇ ಕೊಲೆ ನಡೆದಿರೋದು ಬೆಳಕಿಗೆ ಬಂದಿದೆ.

ಕೊಲೆ ಕೇಸ್ ಗಳಲ್ಲಿ ಆರೋಪಿಗಳು ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದಾರೆ. ಆದ್ರೆ ಎಷ್ಟೇ ಕ್ಲೀನ್ ಮಾಡಿದ್ರೂ ಲೂಮಿನಲ್ ಟೆಸ್ಟ್ ವೇಳೆ ಗೊತ್ತಾಗಿದೆ. ಸದ್ಯ ಈ ಎವಿಡೆನ್ಸ್ ಗಳನ್ನ ದಾಖಲು ಮಾಡಿಕೊಂಡು ಪೊಲೀಸರು ವೆಪನ್ ಸೀಜ್ ಮಾಡಿದ್ದಾರೆ. ಇನ್ನು ದರ್ಶನ್ ಗೆ ಹೆಣೆಯಲು ದೊಡ್ಡ ಕುಣಿಕೆ ರೆಡಿಯಾಗಿದೆ. 17 ಆರೋಪಿಗಳ ಬಳಿ crpc 164 ಹೇಳಿಕೆ ದಾಖಲು ಮಾಡಿಸಲು ಪೊಲೀಸ್ ಸಿದ್ದತೆ ನಡೆದಿದೆ. ಹೌದು
ಭವಿಷ್ಯದಲ್ಲಿ ಉಲ್ಟಾ ಹೊಡೆಯಬಹುದು ಎಂದು 164 ಹೇಳಿಕೆ ದಾಖಲಿಸಲು ಪೊಲೀಸ್ ಸಿದ್ದತೆ ನಡೆದಿದೆ.

ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಹೀಗಾಗಿ ಆರೋಪಿಗಳು ನ್ಯಾಯಾಲಯದ ವಿಚಾರಣೆ ವೇಳೆ ಉಲ್ಟಾ ಹೊಡೆಯಬಾರದು ಎಂದು ಇದನ್ನ ದಾಖಲು ಮಾಡಲಾಗಿದೆ ಅಲ್ಲದೇ, ನಗರ ಪೊಲೀಸ್ ಆಯುಕ್ತರಿಂದಲೂ ತನಿಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ. ಇಂದು ಹಲವರಿಗೆ ನ್ಯಾಯಾಧೀಶರ ಬಳಿ ಕರೆದೊಯ್ದು 164 ಹೇಳಿಕೆ‌ ದಾಖಲು ಮಾಡುವ ಸಾಧ್ಯತೆ ಇದೆ. ಇನ್ನು ಸಿಆರ್ ಪಿಸಿ 164 ಹೇಳಿಕೆ ದಾಖಲು ಮಾಡಿದ್ರೆ ನ್ಯಾಯಾಲಯದ ವಿಚಾರಣೆ ವೇಳೆ ಉಲ್ಟಾ ಹೊಡೆಯಲು ಆಗಲ್ಲ, ಹೀಗಾಗಿ ಭವಿಷ್ಯದಲ್ಲಿ ದರ್ಶನ್ ಗೆ ದೊಡ್ಡ ಸಂಕಷ್ಟವಾಗಲಿದೆ.

Leave a Reply

Your email address will not be published. Required fields are marked *