September 14, 2024

ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಪತ್ನಿ ಕೊಲೆ ಮಾಡಿಸಿರುವ ಭೀಕರ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೆಕಾವು ಗ್ರಾಮದ ಬಳಿ ನಡೆದಿದೆ. ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯ ಎದೆಗೆ ಡ್ರಾಗರ್​ನಿಂದ ಚುಚ್ಚಿ ಕೊಲೆ ಮಾಡಿಸಿ ಬಳಿಕ ಅಪಘಾತವೆಂದು ನಾಟಕವಾಡಿದ್ದಾಳೆ. ಪ್ರಕಾಶ್ (30) ಮೃತ ದುರ್ದೈವಿ. ಹರ್ಷಿತಾ ಕೊಲೆ ಮಾಡಿಸಿದ ಮಹಿಳೆ. ಸದ್ಯ ಘಟನೆ ಸಂಬಂಧ ಹರ್ಷಿತಾಳನ್ನು ಬಂಧಿಸಲಾಗಿದ್ದು ಆಕೆಯ ಸಹೋದರ, ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ

Leave a Reply

Your email address will not be published. Required fields are marked *