September 17, 2024

ಮಧ್ಯಪ್ರದೇಶ: ತನ್ನ ಕುಟುಂಬ ಸದಸ್ಯರೊಂದಿಗೆ ಹೋಟೆಲ್’ಗೆ ಬಂದು, ಖುಷಿ ಖುಷಿಯಲ್ಲಿ ಮಾತನಾಡುತ್ತ ಇನ್ನೇನು ಊಟ ಮಾಡಬೇಕು ಅಂತ ಅನ್ನುವಷ್ಟರಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿ ಪ್ರಾಣವನ್ನೇ ಬಿಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಘಟನೆ ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ತುಣುಕೊಂದು ಇದೀಗ ವೈರಲ್ ಆಗುತ್ತಿದೆ. ರೆಸ್ಟೋರೆಂಟ್ ಒಂದಕ್ಕೆ ಕುಟುಂಬ ಸಮೇತ ಊಟಕ್ಕೆ ಬಂದಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಈ ದೃಶ್ಯ ಅಲ್ಲಿದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

https://x.com/priyarajputlive/status/1800746654641086566?ref_src=twsrc%5Etfw%7Ctwcamp%5Etweetembed%7Ctwterm%5E1800746654641086566%7Ctwgr%5Ef505a160fb41fd64fe2efac5bf3c06a495363ac8%7Ctwcon%5Es1_&ref_url=https%3A%2F%2Ftv9kannada.com%2Ftrending%2Fman-dies-on-spot-after-suffering-heart-attack-in-restaurant-old-video-from-madhya-pradesh-goes-viral-viral-news-mda-850670.html

ಪ್ರಿಯಾ ಸಿಂಗ್ (@priyarajputlive) ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕುಟುಂಬ ಸಮೇತ ರೆಸ್ಟೋರೆಂಟ್ಗೆ ಬಂದಂತಹ ವ್ಯಕ್ತಿಯೊಬ್ಬರು ಅವರೆಲ್ಲರೊಂದಿಗೆ ಖುಷಿಯಿಂದ ಮಾತನಾಡುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಮಾತನಾಡುತ್ತಿರುವಾಗ ಅವರು ಆರ್ಡರ್ ಮಾಡಿದಂತಹ ಫುಡ್ ಬರುತ್ತದೆ. ಇನ್ನೇನೂ ತುತ್ತು ಅನ್ನವನ್ನು ಬಾಯಲ್ಲಿಡಬೇಕು ಅನ್ನುವಷ್ಟರಲ್ಲಿ ಆ ಮಧ್ಯವಯಸ್ಸಿನ ವ್ಯಕ್ತಿ ಹೃದಯಾಘಾತಕ್ಕೆ ತುತ್ತಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ.

Leave a Reply

Your email address will not be published. Required fields are marked *