ಮುಂಬೈನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆಯ ಬಗ್ಗೆ ಕೇಳಿದರೆ ನೀವು ಐಸ್ ಕ್ರೀಂ ತಿನ್ನುವ ಮುನ್ನ ನೂರು ಬಾರಿ ಯೋಚನೆ ಮಾಡುವುದು ಪಕ್ಕಾ. ಕಳೆದ ದಿನ ಮುಂಬೈನ ಮಲಾಡ್‌ನಲ್ಲಿ ಐಸ್ ಕ್ರೀಂ ಕೋನ್‌ನಲ್ಲಿ ತುಂಡಾದ ಮಾನವನ ಬೆರಳು ಪತ್ತೆಯಾಗಿದೆ. ಆನ್‌ಲೈನ್‌ನಲ್ಲಿ ಈ ಐಸ್ ಕ್ರೀಂ ಆರ್ಡರ್ ಮಾಡಲಾಗಿತ್ತು. ಐಸ್ ಕ್ರೀಂ ತಿನ್ನುವಾಗ ಅದರಲ್ಲಿ ಮಾನವನ ಬೆರಳಿನ ತುಂಡು ಕಂಡು ಬಂದಿದೆ.
ಸದ್ಯ ಐಸ್ ಕ್ರೀಂನಲ್ಲಿ ಪತ್ತೆಯಾದ ಬೆರಳನ್ನು ಪೊಲೀಸರು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಬ್ರಾಂಡನ್ ಫೆರಾ Zepto ಅಪ್ಲಿಕೇಶನ್ ಮೂಲಕ ಐಸ್ ಕ್ರೀಮ್ ಅನ್ನು ಆರ್ಡರ್ ಮಾಡಲಾಗಿದೆ. ಐಸ್ ಕ್ರೀಮ್ ಕಂಪನಿಯ ಹೆಸರು ಯಮ್ಮೋ ಐಸ್ ಕ್ರೀಮ್. 102 ರೂಪಾಯಿ ಬೆಲೆಯ ಯಮ್ಮೋ ಅಲ್ಫೋನ್ಸೋ ಮ್ಯಾಂಗೋ ಐಸ್ ಕ್ರೀಮ್ ಆರ್ಡರ್ ಮಾಡಲಾಗಿತ್ತು. ಇದರೊಂದಿಗೆ ಬೇರೆಯದನ್ನೂ ಆರ್ಡರ್ ಮಾಡಲಾಗಿತ್ತು. ಒಟ್ಟು ಬಿಲ್ 253 ರೂಪಾಯಿ ಆಗಿದೆ.
ಪೊಲೀಸ್ ಕ್ರಮ
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಈ ಘಟನೆಯ ಬಗ್ಗೆಯೂ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ. ಐಸ್ ಕ್ರೀಮ್ ಕಂಪನಿ ವಿರುದ್ಧ ಮಲಾಡ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಲಾಡ್ ಪೊಲೀಸರು ಸೆಕ್ಷನ್ 272, 273 ಮತ್ತು 336 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.