ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರ ಅವಧಿ ಮುಗಿದಿದ್ದು, ನೂತನ ವಿರೋಧ ಪಕ್ಷದ ನಾಯಕನಾಗಿ ರಾಜಶೇಖರ್ ಬಸವಣ್ಣೆಪ್ಪ ಕಮತಿ ಆಯ್ಕೆಯಾಗಿದ್ದಾರೆ.
82 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 38 ಸದಸ್ಯರನ್ನು ಹೊಂದಿದ್ದು, ಕಾಂಗ್ರೆಸ್‌ನ 33 ಸದಸ್ಯರಿದ್ದಾರೆ. ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಿದೆ.