ಹುಬ್ಬಳ್ಳಿ: ಸೈಬರ್ ವಂಚಕರ ಜಾಲವನ್ನು
ಪತ್ತೆ ಮಾಡಿರುವ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರು, ದೆಹಲಿಯಲ್ಲಿ “ಇಬ್ಬರು ಮತ್ತು ಮುಂಬೈಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ ಮೊಬೈಲ್, ಲ್ಯಾಪ್ಟಾಪ್ ಸೇರಿ ನೂರಾರು ಬ್ಯಾಂಕ್‌ಗಳ ಖಾತೆಗಳನ್ನು ನಿಷ್ಕ್ರಿಯ ಗೊಳಿಸಿ ₹60 ಲಕ್ಷ ಬಳಕೆಯನ್ನು ತಡೆ ಹಿಡಿದಿದ್ದಾರೆ.
ದೆಹಲಿಯ ನಿಖಿಲಕುಮಾರ್ , ಮುಂಬೈಯ ನಿಗಮ್ ಹಾಗೂ ಸಚಿನ್ ಬಂಧಿತ ಆರೋಪಿಗಳು. ಮೂವರನ್ನು ಹುಬ್ಬಳ್ಳಿಗೆ -ಕರೆ ತಂದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಕಮಿಷನರ್ N ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇಬ್ಬರು ಆರೋಪಿಗಳು ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದು, ಡಾರ್ಕ್‌ನೆಟ್‌ನಲ್ಲಿ ಪರಿಣಿತಿ ಹೊಂದಿ ಕೋಡಿಂಗ್ ಮತ್ತು ಡಿಕೋಡಿಂಗ್ ಮಾಡುವಲ್ಲಿ ಪರಿಣತರು. ಈ ಹಿಂದೆ ಐಟಿ ಕಂಪನಿಯಲ್ಲಿ ಕೆಲಸ ಮಾಡಿ,ಯಾರದ್ದೋ ಖಾತೆಗೆ, ಇನ್ಯಾರದ್ದೋ ಮೊಬೈಲ್ ನಂಬರ್ ಪಡೆದು ವ್ಯವಸ್ಥಿತವಾಗಿ ಮೋಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸೈಬರ್ ಪೊಲೀಸರ ಅತಿ ದೊಡ್ಡ ಕಾರ್ಯಾಚರಣೆ ಎಂದೇ ಹೇಳಲಾಗುತ್ತಿದ್ದು. ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸ್ಲಾಗುತ್ತಿದೆ.