ಹುಬ್ಬಳ್ಳಿ: ಈಶ್ವರ ನಗರದಲ್ಲಿನ ವೈಷ್ಣವಿ ದೇವಸ್ಥಾನದ ಹಿಂಬಾಗದಲ್ಲಿ ನಡೆದಿದ್ದ ಧರ್ಮಾಧಿಕಾರಿಯ ಕೊಲೆಯ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ಸರಿಯಾದ ಸಮಯದಲ್ಲಿ ಮಾಹಿತಿ ನೀಡಿ ಆರೋಪಿ ಪೊಲೀಸರ ಕೈಗೆ ಸಿಗುವಂತೆ ಮಾಡಿದ ಖಾಸಗಿ ವಾಹಿನಿಯ ಕ್ಯಾಮರ್ ಮನ್ ಮಹೇಶ ನನ್ನು ಕಮಿಷನರ್ ಶಶಿಕುಮಾರ್ ಸನ್ಮಾನ ಮಾಡಿದರು.
ಕಳೆದ ರವಿವಾರ ವೈಷ್ಣವಿ ದೇವಸ್ಥಾನದ ಧರ್ಮಾಧಿಕಾರಿ ದೇವೇಂದ್ರಪ್ಪಜ್ಜ ನನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಮರಿಪೇಟ್ ನ ಸಂತೋಷ್ ಬೋಜಗಾರ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.ಕೊಲೆ ಮಾಡಿದ ಸ್ಥಳದಲ್ಲಿ ಸರಿಯಾದ ಸಿಸಿ ಕ್ಯಾಮರಾ ಹಾಗೂ ವಿದ್ಯುತ್ತ ಬೆಳಕು ಇಲ್ಲದ ಕಾರಣ ಆರೋಪಿಯ ಮುಖಚರ್ಯವನ್ಮು ಪತ್ತೆ ಮಾಡಲು ಕೂಡಾ ಪೊಲೀಸರಿಗೆ ಸ್ವಲ್ಪ ಕ್ಲಿಷ್ಟಕರವಾಗಿತ್ತು.
ಹೀಗಾಗಿ ಪೊಲೀಸರು ಆತನ ಕೆಲವು ಚಿತ್ರಗಳನ್ನು ಹರಿಬಿಟ್ಟು ಕೊಲೆಗಾರನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪೊಲೀಸರಿಗೆ ತಿಳಿಸಿ ಅಂತಾ ಮನವಿ ಮಾಡಿದ್ದರು.ಈ ಹಿನ್ನೆಲೆ ಚೆನ್ನಮ್ಮ ಸರ್ಕಲ್ ಬಳಿ ಕೊಲೆಯ ಆರೋಪಿ ಸಂತೋಷ್ ಬೋಜಗಾರ ನನ್ನು ಗುರುತಿಸಿದ ಖಾಸಗಿ ವಾಹಿನಿಯ ಕ್ಯಾಮರಾಮನ್ ಮಹೇಶ ಹಿರಿಯ ಪೊಲೀಸ್ ಅಧಿಕಾರಿಗೆ ಮಾಹಿತಿಯನ್ನು ರವಾನೆ ಮಾಡಿದ್ದ
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೇ ಪಡೆದು ವಿಚಾರಣೆ ಮಾಡಿದಾಗ ಆರೋಪಿ ಕೊಲೆಯಾದ ದೇವೇಂದ್ರಪ್ಪಜ್ಜ ಮಾಟ ಮಂತ್ರ ಮಾಡಿ ನಮ್ಮ ಮನೆತನವನ್ನು ಸರ್ವನಾಶ ಮಾಡಿದ್ದ ಹೀಗಾಗಿ.ಆತನನ್ನು ಕೊಲೆಮಾಡಬೇಕು ಅಂತಾ 8 ವರ್ಷಗಳಿಂದ ಕಾಯುತ್ತಿದೆ ಅಂತಾ ಪೊಲೀಸರ ಮುಂದೆ ಎಲ್ಲ ವಿಷವನ್ನು ಬಾಯ್ಬಿಟ್ಟಿದ್ದ.
ಹೀಗಾಗಿ ಕೊಲೆ ಆರೋಪಿ ಕಂಡ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ ಕ್ಯಾಮರಾಮನ್ ಮಹೇಶ್ ನನ್ನು ಕಮಿಷನರ್ ಶಶಿಕುಮಾರ್ ಸನ್ಮಾನ ಮಾಡಿ 20 ಸಾವಿರ ನಗದನ್ನು ಬಹುಮಾನವನ್ನಾಗಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಡಿಸಿಪಿಗಳಾದ ನಂದಗಾವಿ,ರವೀಶ ಹಾಗೂ ಎಸಿಪಿ ಶಿವಪ್ರಕಾಶ ನಾಯಕ ಉಪಸ್ಥಿತರಿದ್ದರು.