July 1, 2025
Chikkanna_(4)_1659337474674

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ ದಕ್ಷಿಣ ಭಾರತಾದ್ಯಂತ ಸೆನ್ಸೇಷನ್ ಸೃಷ್ಟಿ ಮಾಡಿದೆ. ಇದಕ್ಕೆ ಕಾರಣ ಆಗಿರೋದು ನಟ ದರ್ಶನ್. ಈ ಕೊಲೆ ಕೇಸ್​ನಲ್ಲಿ ಅವರು ಎರಡನೇ ಆರೋಪಿ ಆಗಿದ್ದಾರೆ. ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಒಬ್ಬರು ಒಂದೊಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ದರ್ಶನ್ ಮಾಡಿದ್ದು ತಪ್ಪು ಎಂದು ಕೆಲವರು ಹೇಳಿದರೆ, ಅಭಿಮಾನಿಗಳು ದರ್ಶನ್ ಮಾಡಿದ್ದು ಸರಿ ಎನ್ನುತ್ತಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಖ್ಯಾತ ಹಾಸ್ಯ ಕಲಾವಿದ ಚಿಕ್ಕಣ್ಣನಿಗೆ ಕಾಮಾಕ್ಷಿಪಾಳ್ಯ ಪೊಲೀಸ್ರು ನೋಟಿಸ್‌ ನೀಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆಯಾದ ಶನಿವಾರ ದರ್ಶನ್ ಜೊತೆ ಸ್ಯಾಂಡಲ್‌ವುಡ್‌ನ ಸ್ಟಾರ್ ಹಾಸ್ಯ ನಟ ಚಿಕ್ಕಣ್ಣ ಪಾರ್ಟಿ ಮಾಡಿದ್ದರು. ಶನಿವಾರ ಮಧ್ಯಾಹ್ನನಿಂದ ಸ್ಟೋನಿಬ್ರೂಕ್‌ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಪಾರ್ಟಿ ಮಾಡ್ತಿದ್ದರು. ಈ ವೇಳೆ ದರ್ಶನ್ ಜೊತೆ ಚಿಕ್ಕಣ್ಣ ಪಾರ್ಟಿಯಲ್ಲೇ ಇದ್ದರೆಂದು ತಿಳಿದುಬಂದಿದೆ. ಅಲ್ಲದೇ ಸಂಜೆ ವೇಳೆಗೆ ಸ್ವಲ್ಪ ಕೆಲಸ ಇದೆ ಅಂತಾ ದರ್ಶನ್ ಎದ್ದು ಹೊರಟಿದ್ದರು. ಇದೀಗ ದರ್ಶನ್ ಬಂಧನದಿಂದ ಚಿಕ್ಕಣ್ಣನ ಎದೆಯಲ್ಲಿ ಢವ ಢವ ಶುರುವಾಗಿದೆ. ಇದೀಗ ಕಾಮಾಕ್ಷಿಪಾಳ್ಯ ಪೊಲೀಸ್ರು ಚಿಕ್ಕಣ್ಣನಿಗೆ ಮಾತ್ರವಲ್ಲದೇ ಪಾರ್ಟಿಯಲ್ಲಿ ಇದ್ದ ಎಲ್ಲರಿಗೂ ನೋಟಿಸ್ ನೀಡಿದ್ದಾರೆ.

ಅಲ್ಲದೇ ಕೊಲೆ ವಿಚಾರವಾಗಿ ಸ್ಟೋನಿ ಬ್ರೂಕ್ ಪಬ್ ನಲ್ಲಿ ಏನಾದ್ರು ಚರ್ಚೆಯಾಗಿತ್ತಾ ಅಂತಾ ಅಲ್ಲಿದ್ದವರ ಹೇಳಿಕೆಯನ್ನು ಪಡೆಯಲು ನಿರ್ಧಾರ ಮಾಡಿದ್ದಾರೆ. ಸ್ಟೋನಿ ಬ್ರೂಕ್ ಪಬ್‌ನಲ್ಲಿ ದರ್ಶನ್ ಜೊತೆ ಇದ್ದ ಎಲ್ಲರಿಗೂ ಇದೀಗ ನಡುಕ ಶುರುವಾಗಿದೆ.ಕೊಲೆಯ ಬಗ್ಗೆ ಮಾಹಿತಿ ಇಲ್ಲದೆ ಇದ್ದರೂ ಕೂಡ, ಪಾರ್ಟಿಯಲ್ಲಿದ್ದ ಎಂಬ ಕಾರಣಕ್ಕೆ ಸಾಕ್ಷಿಯಾಗಿ ಪರಿಗಣನೆ ಮಾಡಿಕೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಪೊಲೀಸರು ಚರ್ಚೆ ನಡೆಸುತ್ತಿದ್ದಾರೆ. ಇನ್ನು ಘಟನೆ ನಡೆಯೋ ಮುಂಚೆಯೇ ಪಾರ್ಟಿ ಮುಗಿಸಿ ಚಿಕ್ಕಣ್ಣ ತೆರಳಿದ್ದರು

 

Leave a Reply

Your email address will not be published. Required fields are marked *