July 22, 2024

ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಹೆಚ್ಚಾಗಿದ್ದು, ಈ ಕುರಿತು ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಶೈಲ ಕೌಜಲಗಿ ಇವರು ಪಿಎಸ್ಸಐ ಬಸವರಾಜ ಯಲಗುಡ್ಡ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದರು . ಇನ್ನು ಖಚಿತ ಮಾಹಿತಿ ಮೆರೆಗೆ ಬೈಕ್ ಕಳ್ಳತನ  ಮಾಡುತ್ತಿದ್ದ ೨೩ ವಯಸ್ಸಿನ ಧರ್ಮರಾಜ ಗಂಗಪ್ಪ ಹರಿಜನ ಎಂಬಾತನನ್ನು ಬಂಧಿಸಿ , ಸುಮಾರು ೨ ಲಕ್ಷ ೮೦ ಸಾವಿರ ಮೌಲ್ಯದ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ . ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

ಇನ್ನು ಈ ಒಂದು ಕಾರ್ಯಾಚರಣೆಯನ್ನು ಧಾರವಾಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಗೋಪಾಲ ಬ್ಯಾಕೋಡ  , ಹೆಚ್ಚುವರಿ ಅಧೀಕ್ಷಕರಾದ ನಾರಾಯನ ಭರಮನಿ, ಇವರ ಮಾರ್ಗದರ್ಶನದಲ್ಲಿ ಕಲಘಟಗಿ ಠಾಣೆಯ ಪಿ ಐ ಆದ ಶ್ರೀಶೈಲ ಕೌಜಲಗಿ ಹಾಗು ತನಿಖಾಧಿಕಾರಿ PSI ಸಿ ಎನ್ ಕರವೀರಪ್ಪನವರ  ಸಿಬ್ಬಂದಿಗಳಾದ ರವಿ ಪೂಜಾರ ಲೋಕೇಶ್ ಬೆಂಡಿಕಾಯಿ . ಮಹಾಂತೇಶ ನಾನಾಗೌಡ. ಶ್ರೀಧರ ಗುಗ್ಗರಿಣ ಗೋಪಾಲ್ ಪೀರಗಿ, ಅಂಬರೀಶ್. ಪ್ರಕಾಶಗೌಡಾ ಗೊಳಪ್ಪಗೌಡ್ರ. ಮಹಾದೇವ ನಿಡವಣಿ. ಅಪ್ಪಾಜಿ ಹೊಸಪೇಟೆ ಆರೋಪಿಯನ್ನು  ಬೈಕ ಸಮೇತವಾಗಿ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *