April 30, 2025
Screenshot 2024-06-17 150521

ಕಲಘಟಗಿ: ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಜಿಲ್ಲೆಯಲ್ಲಿ ಕಲಘಟಗಿ ಪೊಲೀಸರೂ ಎತ್ತಿದ ಕೈ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಕಲಘಟಗಿಯ ಅರ್ಚಕರ ಬೈಕ್ ಕಳ್ಳತನ ಪ್ರಕರಣ ಭೇಧಿಸಿರುವ ಕಲಘಟಗಿ ಪೊಲೀಸರು ಕಲಘಟಗಿ ತಾಲೂಕಿನ ಧರ್ಮರಾಜ ಗಂಗಪ್ಪ ಹರಿಜನ ಎನ್ನುವ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದು .ಆರೋಪಿಯಿಂದ ನಾಲ್ಕು ಬೈಕ್ ವಶಪಡಿಸಿಕೊಂಡಿದ್ದಾರೆ.

ಕಲಘಟಗಿ ಪೊಲೀಸ್ ಠಾಣೆಯ ಇನ್ಸಾಪೇಕ್ಟರ್ ಶ್ರೀಶೈಲ ಕೌಜಲಗಿ  ನೇತೃತ್ವದಲ್ಲಿ ತನಿಖಾಧಿಕಾರಿ PSI ಸಿ ಎನ್ ಕರವಿರಪ್ಪನವರ ಹಾಗೂ ಸಿಬ್ಬಂದಿಗಳಾದ ರವಿ ಪೂಜಾರ್, ಲೋಕೇಶ್ ಬೆಂಡಿಕಾಯಿ . ಮಹಾಂತೇಶ ನಾನಾಗೌಡ, ಶ್ರೀಧರ ಗುಗ್ಗರಿ, ಗೋಪಾಲ್ ಪೀರಗಿ, ಅಂಬರೇಶ್ ಪ್ರಕಾಶಗೌಡಾ ಗೊಳಪ್ಪಗೌಡ್ರ, ಮಹಾದೇವ ನಿಡವಣಿ, ಅಪ್ಪಾಜಿ ಹೊಸಪೇಟೆ ಕಾರ್ಯಾಚರಣೆ ನಡೆಸಿದ್ದು, ಅಧಿಕಾರಿಗಳು ಇವರನ್ನು ಶ್ಲಾಘಿಸಿದ್ದಾರೆ.

 

Leave a Reply

Your email address will not be published. Required fields are marked *