October 13, 2025
blast
ಹುಬ್ಬಳ್ಳಿ:   ಕರಾವಳಿ ಕರ್ನಾಟಕದ ಮಂಗಳೂರು  ನಗರದ ಹೊರವಲಯದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋದಲ್ಲಿ ಪ್ರೇಮರಾಜ್ ಎಂಬುವರ  ಕಾರ್ಡ್ ಆಧಾರದ ಮೇಲೆ ಹುಬ್ಬಳ್ಳಿ ಪೊಲೀಸರು ನಗರದ ಮಧುರಾ ಕಾಲೋನಿಯ ಪ್ರೇಮರಾಜ್  ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪ್ರೇಮರಾಜ್ ತಂದೆ ಮಾರುತಿ ಹುಟಗಿ, ಘಟನೆಗೂ ನನ್ನ‌ ಮಗನಿಗೂ ಯಾವುದೇ ಸಂಬಂಧವಿಲ್ಲ. ನನ್ನ ಮಗ ಅಮಾಯಕ, ಅವನು ಆರು ತಿಂಗಳ ಹಿಂದೆ ಆಧಾರ ಕಾರ್ಡ್ ಕಳೆದುಕೊಂಡಿದ್ದ‌. ಮಗನ ಆಧಾರ ದುರ್ಬಳಕೆ ಆಗಿದೆ. ನಿನ್ನೆ ಪೊಲೀಸರು ಬಂದು ನನ್ನ ಮಗನ ಬಗ್ಗೆ ಮಾಹಿತಿ ಕೇಳಿದ್ರು, ನಾನೂ ಎಲ್ಲಾ‌ ಮಾಹಿತಿಯನ್ನ ಪೊಲೀಸರ ಎದುರು ಹೇಳಿದ್ದೇನೆ. ಮಗನ ಜೊತೆಗೆ ಪೊಲೀಸ್ ಅಧಿಕಾರಿಗಳು ಮಾತನಾಡಿದ್ದಾರೆ ಎಂದರು.ಪ್ರೇಮರಾಜ್ ತಾಯಿ ರೇಣುಕಾ ಮಾತನಾಡಿ, ನನ್ನ ಮಗ ಅಂತವನ್ನಲ್ಲ, ಇಂತಹ ಮಕ್ಕಳನ್ನು ಪಡೆದ ನಾನು ಪುಣ್ಯವಂತೆ. ಈಗ ದಾಖಲಾತಿ ಪರಿಶೀಲನೆ ನಡೆಯುತ್ತಿದೆ. ಪೊಲೀಸರು ಕೇಳಿದ ಎಲ್ಲ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರೇಮರಾಜ ಆಧಾರ ಕಾರ್ಡ್ ಕಳೆದುಕೊಂಡಿದ್ದ. ಆಗ ದೂರು ಕೊಡು ಅಂತ ಸಲಹೆ ಕೊಟ್ಟಿದ್ದೆ. ತುಮಕೂರಿನಲ್ಕೂ ನನ್ನ ಮಗನ ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ

Leave a Reply

Your email address will not be published. Required fields are marked *