ಬೆಂಗಳೂರು: ಇಡೀ ರಾಜ್ಯಕ್ಕೆ ಹೋಲಿಸಿದರೆ ಡೆಂಗ್ಯೂ ಪ್ರಕರಣಗಳಲ್ಲಿ ಸಿಂಹಪಾಲು ಬೆಂಗಳೂರಿನದ್ದಾಗಿದೆ. ಹೀಗಿರುವಾಗ ನಗರಕ್ಕೆ ಮತ್ತೊಂದು ಭೀತಿ ಶುರುವಾಗಿದೆ. ಚಿಕುನ್ ಗುನ್ಯಾ ಪ್ರಕರಣಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿರುವುದು ತಿಳಿದು ಬಂದಿದೆ.
ಕಳೆದ ತಿಂಗಳ 15 ರಂದು ರಾಜ್ಯದಲ್ಲಿ ಸುಮಾರು 687 ಪ್ರಕರಣಗಳು ದಾಖಲಾಗಿದ್ದವು. ಬಿಬಿಎಂಪಿ ವ್ಯಾಪ್ತಿಯಲ್ಲಿ 123 ಕೇಸ್ ದಾಖಲಾಗಿತ್ತು. ಡೆಂಗ್ಯೂ ನಡುವೆ ಇದೀಗ 15 ದಿನಗಳಲ್ಲೇ ಚಿಕುನ್ ಗುನ್ಯಾ ಕೇಸ್‌ಗಳು ಹೆಚ್ಚಾಗಿವೆ. ಸೋಮವಾರದ ವರೆಗೆ ರಾಜ್ಯದಲ್ಲಿ 810 ಪ್ರಕರಣ ಕಂಡುಬಂದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 176 ಚಿಕುನ್ ಗುನ್ಯಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಇದುವರೆಗೂ ಒಂದು ತಿಂಗಳಲ್ಲಿ 303 ಪ್ರಕರಣ ದಾಖಲಾಗಿದೆ.
ನಗರದ ಜನರು ಎಚ್ಚರಿಕೆ ವಹಿಸಬೇಕಾಗಿದೆ. ಸಂಧಿಗಳಲ್ಲಿ ನೋವು, ಜ್ವರ ಕಂಡು ಬಂದಲ್ಲಿ ವೈದ್ಯರನ್ನ ಸಂಪರ್ಕಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಲಕ್ಷಣಗಳು ಕಂಡುಬಂದಲ್ಲಿ ಚಿಕುನ್ ಗುನ್ಯಾ ಪರೀಕ್ಷೆ ಮಾಡಿಸಿದರೆ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ