October 13, 2025
WhatsApp Image 2024-07-16 at 15.52.45_93c9e46f

ಉಪನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ. ಕೇವಲ 24 ಗಂಟೆಯಲ್ಲಿ ಕಳ್ಳತನದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಇಲ್ಲಿನ ದಾಜಿಬಾನಪೇಟೆಯಲ್ಲಿರುವ ಗ್ಯಾಸ್ ಡಿಸ್ಟ್ರಿಬ್ಯೂಟರ್ ಏಜೆನ್ಸಿವೊಂದರಲ್ಲಿ ಜು.13 ರಂದು ಬರೋಬ್ಬರಿ 5.37.900 ರೂ ನಗದನ್ನು ಯಾರೋ ಕಳ್ಳರು ಕದ್ದು ಪರಾರಿಯಾಗಿದ್ದರು.ಸಂಬಂಧ ಏಜೆನ್ಸಿಯವರು ಉಪನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿದ್ದರು.

ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪನಗರ ಠಾಣೆಯ ಪೊಲೀಸರು ಎಸಿಪಿ ಶಿವಪ್ರಕಾಶ್ ನಾಯಕ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಕೇವಲ 24 ಗಂಟೆಯಲ್ಲಿ ಕಳ್ಳತನದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇನ್ನೂ ಬಂಧಿತರನ್ನು ಕೈಲಾಸ ಬಿಷ್ಟೋಯಿ, ಗಂಗಾವಿಷ್ಣು ಬಿಷ್ಟೋಯಿ ಎಂದು ಗುರುತಿಸಲಾಗಿದೆ. ಇವರು ಅದೇ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ‌. ಇವರಿಂದ ಕಳ್ಳತನದ ಹಣವನ್ನು ವಶಪಡಿಸಿಕೊಂಡಿದ್ದಾರೆ.ಇನ್ನು ಉಪನಗರ ಪೊಲೀಸರ ಕಾರ್ಯವನ್ನು ಹು-ಧಾ ಪೋಲಿಸ್ ಆಯಕ್ತ ಎನ್.ಶಶಿಕುಮಾರ್ ಪ್ರಶಂಶಿಸಿದ್ದಾರೆ.

Leave a Reply

Your email address will not be published. Required fields are marked *