ಹುಬ್ಬಳ್ಳಿ: ಸರಿ ಸುಮಾರು 30 ವಯಸ್ಸಿನ ಆಸುಪಾಸಿನ ಯುವಕ ಹುಬ್ಬಳ್ಳಿಯ ಹೃದಯ ಭಾಗದ ಮಾರುಕಟ್ಟೆಯಲ್ಲಿ ನಿರ್ಗತಿಕನಾಗಿ ರಸ್ತೆ ಬದಿಯಲ್ಲಿ ಹುಚ್ಚನಂತೆ ಕುಳಿತಿರುವುದನ್ನ ಗಮನಿಸಿದ ಹುಬ್ಬಳ್ಳಿ ಟೌನ್ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮಹಮ್ಮದ್ ರಫೀಕ್ ಮಾನವೀಯತೆ ಮೆರೆದಿದ್ದಾರೆ.
ಬಿಕ್ಷುಕನ ರೀತಿಯಲ್ಲಿ ಇದ್ದ ಯುವಕನಿಗೆ ಕಟಿಂಗ್ ಮಾಡಿಸಿ,ಹೊಸ ಬಟ್ಟೆ ಕೂಡಸಿ ಮತ್ತೆ ತಮ್ಮದೇ ವ್ಯಾಪ್ತಿಯಲ್ಲಿ ಒಂದು ಕೆಲಸ ಕೊಡಿಸಿ ಆತನ ಬದಕು ರೂಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿ,ನಾಗರಿಕ ಸಮಾಜದಲ್ಲಿ ನಾವು ಹೇಗೆ ಪರೋಪಕಾರಿಯಾಗಿ ಬದುಕಬೇಕು ಎಂದು ತೋರಿಸಿಕೊಟ್ಟಿದ್ದಾರೆ.
ಇನ್ನು ಈ ಬಗ್ಗೆ ಸ್ಥಳೀಯರು ಇನ್ಸಪೆಕ್ಟರ್ ಅವರನ್ನು ಮಾತನಾಡಿಸುವ ವೇಳೆ ನಮ್ಮ ಈ ಕಾರ್ಯಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ N ಶಶಿಕುಮಾರ್ ಪ್ರೇರಣೆ ಆಗಿದ್ದು. ಅವರ ನಿರ್ದೇಶನದಂತೆ ನಾವು ಕಾರ್ಯ ನಿರ್ವಹಿಸುತ್ತಿದ್ದು.ಕೇವಲ ಅಪರಾಧಿಗಳನ್ನು ಮಟ್ಟ ಹಾಕುವುದು ಅಲ್ಲದೆ ಸಮಾಜಕ್ಕೆ ನಮ್ಮ ಕೈಲಾದ ಸಹಾಯ ಮಾಡಲೇ ಬೇಕು ಎಂದು ತಿಳಿಸಿದ್ದಾರೆ.ಸಾದ್ಯ ಇನ್ಸಪೆಕ್ಟರ್ ಮಹಮ್ಮದ್ ರಫೀಕ್ ಅವರ ಕಾರ್ಯಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದು ತಮಗೆಲ್ಲಾ ಮಾದರಿ ಎಂದು ತಿಳಿಸಿದ್ದಾರೆ.