ವಕೀಲರ ಸೇವೆಗಳಿಗೆ ಸಂಬಂಧಿಸಿದಂತೆ ಆಸ್ಟೈನ್ ಮೂಲಕ ಜಾಹೀರಾತು ನೀಡಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೆಲಸ ಕೇಳುವುದನ್ನು ತಡೆಗಟ್ಟಲು ಭಾರತೀಯ ವಕೀಲರ ಪರಿಷತ್ತು ಮುಂದಾಗಿದೆ. ಅಲ್ಲದೇ ಇಂತಹ ಜಾಹೀರಾತು ನೀಡುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ವಕೀಲರ ಪರಿಷತ್ತುಗಳಿಗೆ ಬಿಸಿಐ ಸೂಚನೆ ನೀಡಿದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳನ್ನು ಉಲ್ಲಂಘಿಸಿ ಆನ್ ಲೈನ್ ವೆಬ್ ಸೈಟ್ ಗಳ ಮೂಲಕ ವಕೀಲರು ಕೆಲಸ ಕೇಳುವುದನ್ನು ಖಂಡಿಸಿ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿಗೆ ಅನುಗುಣವಾಗಿ ಬಿಸಿಐ ಈ ನಿರ್ದೇಶನ ನೀಡಿದೆ.