ದೇಶದಲ್ಲಿ ಇಂದಿನಿಂದ ಕಾನೂನು ಬದಲಾಗಲಿದ್ದು, ಬ್ರಿಟೀಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ , ಸಿಆರ್‌ಪಿಸಿ, ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ ಗುಡ್‌ಬೈ ಹೇಳಲಾಗುತ್ತದೆ. ಐಪಿಸಿ ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ, ಸಿಆರ್‌ಪಿಸಿ ಜಾಗದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ , ಇಂಡಿಯನ್ ಎವಿಡೆನ್ಸ್ ಆಕ್ಟ್ ಜಾಗದಲ್ಲಿ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ಬರುತ್ತಿದೆ.
ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್ ಒಳಗೊಂಡಿದೆ. 20 ಹೊಸ ಅಪರಾಧಗಳು ಸೇರಿಸಲ್ಪಟ್ಟಿವೆ, 33 ಅಪರಾಧಗಳ ಶಿಕ್ಷೆ ಅವಧಿ ಹೆಚ್ಚಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 531 ಸೆಕ್ಷನ್ ಒಳಗೊಂಡಿದೆ. 177 ಕಲಂಗಳನ್ನು ಬದಲಿಸಲಾಗಿದೆ. ಭಾರತೀಯ ಸಾಕ್ಷ್ಯ ಅಧಿನಿಯಮ 170 ಸೆಕ್ಷನ್ ಒಳಗೊಂಡಿದೆ.
ಹಿಂದೆ ಎಷ್ಟಿತ್ತು? ಈಗ ಎಷ್ಟು ಸೆಕ್ಷನ್‌ಗಳು ಇದೆ? ಎಂಬುದನ್ನ ನೋಡುವುದಾದ್ರೆ… ಭಾರತೀಯ ದಂಡ ಸಂಹಿತೆ (IPC) 511 ಸೆಕ್ಷನ್ ಇದ್ದರೆ ಭಾರತೀಯ ನ್ಯಾಯ ಸಂಹಿತಾ(BNS)-358 ಸೆಕ್ಷನ್‌ಗಳು ಇದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) 484 ಸೆಕ್ಷನ್‌ಗಳು ಇದ್ದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(BNSS) – 531 ಸೆಕ್ಷನ್‌ಗಳು ಇದೆ.
ಭಾರತೀಯ ಸಾಕ್ಷ್ಯ ಕಾಯ್ದೆ (IEA) 167 ಸೆಕ್ಷನ್‌ಗಳು ಇದ್ದರೆ ಭಾರತೀಯ ಸಾಕ್ಷ್ಯ ಅಧಿನಿಯಮ (BSA) 170 ಸೆಕ್ಷನ್‌ಗಳು ಇದೆ.