September 19, 2024

ನ್ಯಾಯಾಲಯಗಳಿಗೆ ವಿಡಿಯೋ ಕಾನ್ನರೆನ್ಸ್ ಮೂಲಕ ವಕೀಲರು ಹಾಗು ಪಾರ್ಟಿ-ಇನ್-ಪರ್ಸನ್ ಹಾಜರಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನಿಯಮ ರೂಪಿಸಿದೆ. ಹೊಸ ನಿಯಮಗಳ ಪ್ರಕಾರ ಅಂದಿನ ಕಾಸ್ ಲಿಸ್ಟ್ ನಲ್ಲಿ (ಪ್ರಕರಣಗಳ ಪಟ್ಟಿ) ಇಲ್ಲದ ಯಾರೂ ಕೂಡ ಸಮ್ಮತಿಯಿಲ್ಲದೆ ವಿಸಿಗೆ ಹಾಜರಾಗುವಂತಿಲ್ಲ ಎಂಬುದು ಪ್ರಮುಖವಾಗಿದೆ. ನಿಯಮಗಳಿಗೆ ಸಂಬಂಧಿಸಿದಂತೆ ಇದೇ ಜೂನ್ 27 ರಂದು ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಕೆ.ಎಸ್ ಭರತ್ ಕುಮಾ‌ರ್ ಪ್ರಕಟಣೆ ಹೊರಡಿಸಿದ್ದಾರೆ.

ಕೋರ್ಟ್ ಕಲಾಪದಲ್ಲಿ ಭಾಗವಹಿಸುವ ಎಲ್ಲರೂ ನ್ಯಾಯಾಲಯದ ಪ್ರಕ್ರಿಯೆಯ ಘನತೆಗೆ ಅನುಗುಣವಾಗಿ ಸೂಕ್ತ ಉಡುಪು ಧರಿಸಬೇಕು. ವಕೀಲರು 1961ರ ವಕೀಲರ ಕಾಯ್ದೆಯ ಅಡಿಯಲ್ಲಿ ಸೂಚಿಸಲಾದ ವೃತ್ತಿಪರ ಉಡುಪುಗಳನ್ನು ಸೂಕ್ತವಾಗಿ ಧರಿಸಬೇಕು. ಪೊಲೀಸ್‌ ಅಧಿಕಾರಿಗಳು ಸಂಬಂಧಿತ ಕಾನೂನು ಅಥವಾ ಆದೇಶಗಳ ಅಡಿಯಲ್ಲಿ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾದ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಬೇಕು. ನ್ಯಾಯಾಂಗ ಅಧಿಕಾರಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಯ ಉಡುಪುಗಳು ಹೈಕೋರ್ಟ್‌ನಿಂದ ಆ ಪರವಾಗಿ ಸೂಚಿಸಲಾದ ಸಂಬಂಧಿತ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದಂತೆ ಇರುತ್ತದೆ. ಡ್ರೆಸ್ ಕೋಡ್ ಬಗ್ಗೆ ನ್ಯಾಯಮೂರ್ತಿಗಳು ಅಥವಾ ಕೋರ್ಟ್ ಅಧಿಕಾರಿಯ ನಿರ್ಧಾರವು ಅಂತಿಮವಾಗಿರುತ್ತದೆ.

ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ. ಸಮಯಪಾಲನೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು.

3. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಕರಣವನ್ನು ಕರೆಯಲಾಗುವುದು ಮತ್ತು ಹಾಜರಾತಿಗಳನ್ನು ದಾಖಲಿಸಲಾಗುತ್ತದೆ.

4. ಪ್ರತಿಯೊಬ್ಬ

ಭಾಗವಹಿಸುವವರು ಭೌತಿಕ ನ್ಯಾಯಾಲಯದಲ್ಲಿ ಅನುಸರಿಸುವ ಸೌಜನ್ಯಗಳು ಮತ್ತು ಪ್ರೋಟೋಕಾಲ್ಗಳಿಗೆ ಬದ್ಧರಾಗಿರಬೇಕು. ನ್ಯಾಯಾಧೀಶರನ್ನು “ಮೇಡಂ/ ಸರ್” ಅಥವಾ “ಯುವರ್ ಆನರ್’ ಎಂದು ಸಂಬೋಧಿಸಲಾಗುತ್ತದೆ. ಅಲ್ಲದೇ ನಿರ್ದಿಷ್ಟವಾಗಿ ಅನುಮತಿಸದ ಹೊರತು, ಕಾಸ್ ಲಿಸ್ಟ್ (ಪ್ರಕರಣಗಳ ಪಟ್ಟಿ)ಯಲ್ಲಿ ಪಟ್ಟಿ ಮಾಡಲಾದ ವಕೀಲರು ಮತ್ತು ಕಕ್ಷಿದಾರರನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ಕೋರ್ಟ್ ಹಾಲ್ ವೀಡಿಯೊ ಕಾನ್ಸರೆನ್ಸ್‌ಗೆ ಲಾಗಿನ್ ಆಗುವಂತಿಲ್ಲ

Leave a Reply

Your email address will not be published. Required fields are marked *