
ಹುಬ್ಬಳ್ಳಿ : ಸೋಷಿಯಲ್ ಮೀಡಿಯಾ ಹುಚ್ಚು ಇದೀಗ ಸಮಾಜವನ್ನು ವ್ಯಾಪಕವಾಗಿ ಆಕ್ರಮಿಸಿಕೊಂಡು ಬಿಟ್ಟಿದೆ.ತಮ್ಮ ಪೇಸ್ ಬುಕ್,insta ಗ್ರಾಂ ಪ್ರೊಫೈಲ್ ನಲ್ಲಿ ವ್ಯೂಸ್ ಹಾಗೂ ಲೈಕ್ ಪಡೆಯಲು ದಿನನಿತ್ಯ ಇನ್ನಿಲ್ಲದ ಕಸರತ್ತು ಕೂಡ ಮಾಡುತ್ತಾರೆ.ಕೆಲವೊಮ್ಮೆ ಈ ಕಸರತ್ತುಗಳು ಯಶಸ್ವಿ ಕೂಡ ಆಗುತ್ತವೆ ಎಂದರೆ ತಪ್ಪಾಗಲಾರದು ಇಂತಹದೇ ಒಂದು ಘಟನೆ ಇದೀಗ ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದ್ದು ರೀಲ್ಸ್ ಗೋಸ್ಕರ ನಡೆಸಿದ ಪ್ರಹಸನ ಸಾಕಷ್ಟು ಪ್ರಚಾರ ತಂದು ಕೊಟ್ಟಿದ್ದು ಇದನ್ನ ಗುರುತಿಸುವಲ್ಲಿ ಮಾಧ್ಯಮ ರಂಗ ಕೂಡ ಎಡವಿದ್ದು ಯುವಕರಿಗೆ ಮುಖ್ಯ ವೇದಿಕೆಯಲ್ಲಿ ರಾಜ್ಯಾದ್ಯಂತ ಪ್ರಚಾರ ನೀಡಿದಂತೆ ಆಗಿದೆ.
ಹಳೆ ಹುಬ್ಬಳ್ಳಿಯ ಕೆಲ ಮಧ್ಯಮ ವರ್ಗದ ಯುವಕರು ತಮ್ಮ ಮನೆಯಲ್ಲಿ ರ್ರೀಲ್ಸ್ ಮಾಡುವಾಗ ಹಾಡಿನೊಂದಿಗೆ ಹಣವನ್ನು ತೂರಿ ಇದನ್ನು ಅಪ್ಲೋಡ್ ಮಾಡಿದ್ದಾರೆ ಇದನ್ನು ಶ್ರೀಮಂತ ಯುವಕರ ಬರ್ತ್ ಡೇ ಸೆಲೆಬ್ರೇಶನ್ ಎಂದು ಅರಿತು ಟೀಕಿಸುವ ಭರದಲ್ಲಿ ಸಾಕಷ್ಟು ಪ್ರಚಾರ ನೀಡಿದ್ದು ಯುವಕರು ಒಳಗೊಳಗೇ ಖುಷಿ ಪಡುವಂತಾಗಿದೆ.ಇನ್ನು ರಾತ್ರೋ ರಾತ್ರಿ ಪ್ರಚಾರ ಪಡೆಯಲು ಯುವಕರು ಇದೆ ರೀತಿ ಇನ್ನೊಂದು ರೌಂಡ್ ಕಸರತ್ತು ಕೂಡ ನಡೆಸುವ ಸಾದ್ಯತೆ ಇದೆ ಎಂದು ಹೇಳಬಹುದು