August 19, 2025
Screenshot 2024-06-27 173024

ಆಸ್ತಿ ವಿಚಾರಕ್ಕೆ ಬುದ್ದಿ ಮಾತು ಹೇಳಿದ ವ್ಯಕ್ತಿಯೊಬ್ಬನ ಮೇಲೆ ಮನೆಗೆ ನುಗ್ಗಿ ಹಲ್ಲೆ ಮಾಡಿದ ಘಟನೆ ಕುಂದಗೋಳದಲ್ಲಿ ನಡೆದಿದೆ.ಕುಂದಗೋಳದ ಹೊಸ ಹಂಚಿನಾಳ ಗ್ರಾಮದಲ್ಲಿ ಈ ಒಂದು ಘಟನೆ ನಡದಿದೆ.ಹೌದು ಕರಬಸಪ್ಪ ಶಿವಜೋಗಿ ಹಲ್ಲೆಗೊಳಗಾಗಿರುವ ವ್ಯಕ್ತಿಯಾಗಿದ್ದು,

ಅಂಗವಿಕಲನಾಗಿರುವ ಇವನು ಸಹೋದರರಾದ ಈರಪ್ಪ ಅರಳಿಕಟ್ಟಿ,ಬಸವರಾಜ ಅರಳಿಕಟ್ಟಿ,ಉಮೇಶ ಅರಳಿಕಟ್ಟಿ,ಎಂಬುವರ ನಡುವಿನ ಆಸ್ತಿ ವಿಚಾರ ಕುರಿತಂತೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡುವ ಸಮಯದಲ್ಲಿ ಬುದ್ದಿವಾದ ಮಾತನ್ನು ಹೇಳಿದ್ದಾನೆ.

ಇದರಿಂದಾಗಿ ಅಸಮಾಧಾನಗೊಂಡ ಅರಳಿಕಟ್ಟಿ ಸಹೋದರರು ಕರಬಸಪ್ಪನ ಮೇಲೆ ಹಲ್ಲೆಯನ್ನು ಮಾಡಿದ್ದಾರಂತೆ.ಬಿಜೆಪಿ ಮುಖಂಡ ಈರಪ್ಪ ತನ್ನ ಇಬ್ಬರು ಸಹೋದರರೊಂದಿಗೆ ಸೇರಿಕೊಂಡು ಹಲ್ಲೆಯನ್ನು ಮಾಡಿದ್ದಾನೆ.ಬೆಳಿಗ್ಗೆ ತನ್ನ ಮನೆಯಲ್ಲಿ ಮಲಗಿದ್ದ ಕರಬಸಪ್ಪನ ಮೇಲೆ ಸಹೋದರರು ಸೇರಿಕೊಂಡು ಹಲ್ಲೆಯನ್ನು ಮಾಡಿದ್ದಾರೆ.ಹಲ್ಲೆಯನ್ನು ಮಾಡುವ ಸಮಯದಲ್ಲಿ ಇಧನ್ನು ಬಿಡಿಸಲು ಹೋದ ಮಹಿಳೆಯರ ಮೇಲೂ ಕೂಡಾ ಸಹೋದರರು ಹಲ್ಲೆಯನ್ನು ಮಾಡಿದ್ದು,

ಸಧ್ಯ ತೀವ್ರವಾಗಿ ಹಲ್ಲೆಗೊಳಗಾಗಿರುವ ಕರಬಸಪ್ಪ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಇತ್ತ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇವೆಲ್ಲದರ ನಡುವೆ ಬಿಜೆಪಿ ಮುಖಂಡರಾಗಿರುವ ಹಿನ್ನಲೆಯಲ್ಲಿ ಕ್ರಮವನ್ನು ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.ಆಸ್ತಿ ವಿಚಾರಕ್ಕೆ ಬುದ್ದಿವಾದ ಹೇಳಿದ್ದಕ್ಕಾಗಿ ಸಹೋದರಿಂದ ಕರಬಸಪ್ಪನ ಹಲ್ಲೆಗೊಳಗಾಗಿದ್ದು ಮನಸೋ ಇಚ್ಚೇಯಿಂದ ಥಳಿತಕ್ಕೊಳಗಾಗಿರುವ ಕರಬಸಪ್ಪನಿಗೆ ನ್ಯಾಯ ಒದಗಿಸಿಕೊಡುವವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ.

 

Leave a Reply

Your email address will not be published. Required fields are marked *