August 19, 2025
12541-185x104

ಬಿಹಾರ: ಬಿಹಾರದ ಸೀತಾಮರ್ಹಿಯಲ್ಲಿ ಯುವತಿಯೊಬ್ಬಳು  ತಮ್ಮ ಮನೆಯ ಟೆರೆಸ್ ಮೇಲೆ ಮಳೆ ನಡುವೆಯೇ  ನಿಂತು ರೀಲ್ಸ್ ಮಾಡುತ್ತಿದ್ದ ವೇಳೆ ಸಿಡಿಲು ಬಡಿದ ಘಟನೆ ನಡೆದಿದೆ. ಹೌದು ಯುವತಿಯೊಬ್ಬಳು ತಮ್ಮ ಮನೆಯ ಟೆರೆಸ್ ಮೇಲೆ ನಿಂತು ರೀಲ್ಸ್ ಮಾಡುತ್ತಿದ್ದ ವೇಳೆ ಸಿಡಿಲು ಬಡಿದ ಘಟನೆ ವರದಿಯಾಗಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಮಳೆ ನಡುವೆಯೇ ಮನೆಯ ಟೆರೆಸ್ ಮೇಲೆ ಯುವತಿಯೊಬ್ಬಳು ರೀಲ್ಸ್ ಮಾಡುತ್ತಿದ್ದ ವೇಳೆ ಮನೆಯ ಮೇಲ್ಛಾವಣಿಗೆ ಸಿಡಿಲು ಬಡಿದಿದೆ. ಸಿಡಿಲು ಬಡಿಯುತ್ತಲೇ ಯುವತಿ ಅಲ್ಲಿಂದ ಕಾಲ್ಕಿತ್ತಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ.

https://x.com/Sanchit_global/status/1805966359450271872?ref_src=twsrc%5Etfw%7Ctwcamp%5Etweetembed%7Ctwterm%5E1805966359450271872%7Ctwgr%5Ee37d4d214a8328339b63f767f03c106690a940f8%7Ctwcon%5Es1_&ref_url=https%3A%2F%2Fwww.kannadaprabha.com%2Fnation%2F2024%2FJun%2F26%2Fgirl-narrowly-avoids-lightning-strike-while-filming-reel-in-bihars-sitamarhi-video-goes-viral

ಯುವತಿ ರೀಲ್ಸ್ ಮಾಡಲು ಇಟ್ಟಿದ್ದ ಮೊಬೈಲ್ ನಲ್ಲೇ ಈ ವಿಡಿಯೋ ದಾಖಲಾಗಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಅಂತೆಯೇ ಈ ವಿಡಿಯೋ ಪ್ರಕೃತಿ ಎದುರು ಮತ್ತು ಮಳೆ ಸಂದರ್ಭದಲ್ಲಿ ಹುಚ್ಚಾಟಗಳಿಗೆ ಮುಂದಾಗದಂತೆ ಎಚ್ಚರಿಕೆ ನೀಡಿದಂತಿದೆ.

 

Leave a Reply

Your email address will not be published. Required fields are marked *