ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಲ್ಲಿ ಹಲವು ವಿದ್ಯಮಾನಗಳು ನಡೆದಿವೆ. ಚಿತ್ರದುರ್ಗದ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ದರ್ಶನ್ ಮತ್ತು ಇತರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಶ್ಲೀಲ ವಿಡಿಯೋ, ಅತ್ಯಾಚಾರ ಪ್ರಕರಣದ ಪ್ರಜ್ವಲ್ ರೇವಣ್ಣ ತಗಲಾಕಿಕೊಂಡಿದ್ದಾರೆ. ಅಲ್ಲದೇ, ಬಿಎಸ್ ಯಡಿಯೂರಪ್ಪ ಅವರು ಪೋಕ್ಸೊ ಕೇಸ್ ಎದುರಿಸುತ್ತಿದ್ದಾರೆ. ಸದ್ಯ ಈ ಬಗ್ಗೆ ನಟಿ ರಮ್ಯಾ ಟ್ವಿಟ್ ಮಾಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಸದ್ಯ ಹಲವು ಪ್ರಕರಣಗಳು ಸುದ್ದಿಯಲ್ಲಿವೆ. ಶ್ರೀಮಂತರು, ಪ್ರಭಾವಶಾಲಿಗಳ ಹಿಂಸಾತ್ಮಕ ಕ್ರಿಯೆಯಿಂದ ಬಡವರು, ಮಹಿಳೆಯರು, ಮಕ್ಕಳು ತೊಂದರೆ ಅನುಭವಿಸುತ್ತಾರೆ. ಕರ್ನಾಟಕದ ಜನಸಾಮಾನ್ಯರು ಇದರಿಂದ ತೊಂದರೆ ಅನುಭವಿಸುತ್ತಾರೆ. ಈ ಅಪರಾಧಗಳನ್ನು ಹೊರಕ್ಕೆ ತಂದ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಹ್ಯಾಟ್ಸಪ್. ಇಂತಹ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಿದಾಗ ಮತ್ತು ಇಂತಹ ಪ್ರಕರಣಗಳಿಗೆ ನಿಜವಾದ ತಾರ್ಕಿಕ ಅಂತ್ಯ ದೊರಕಿದಾಗ ನ್ಯಾಯ ದೊರಕುತ್ತದೆ.
ನ್ಯಾಯವು ಮೇಲುಗೈ ಸಾಧಿಸದೆ ಇದ್ದರೆ ಇಂತಹ ವಿಚಾರಗಳ ಕುರಿತು ಸಾರ್ವಜನಿಕರಿಗೆ ನಾವು ಏನು ಸಂದೇಶ ನೀಡುತ್ತೇವೆ” ಎಂದು ಅವರು ಟ್ವಿಟ್ ಮಾಡಿದ್ದಾರೆ. ಇಂತಹ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಈ ಮೂಲಕ ಸಾರ್ವಜನಿಕರಿಗೆ ನ್ಯಾಯ ವ್ಯವಸ್ಥೆಯ ಕುರಿತು ಸರಿಯಾದ ಸಂದೇಶ ನೀಡಬೇಕು ಎನ್ನುವ ಅರ್ಥದಲ್ಲಿ ನಟಿ ರಮ್ಯಾ ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್‌ಗೆ ದರ್ಶನ್, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ. ಯಡಿಯೂರಪ್ಪ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿದ್ದಾರೆ.
ಈ ಕುರಿತು ನಟಿ ರಮ್ಯಾ ಅವರ ಈ ಟ್ವಿಟ್‌ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ. ನೀವು ರಾಜಕೀಯಕ್ಕೆ ಮತ್ತೆ ಬನ್ನಿ ಮೇಡಂ ಎಂದು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. “ದಯವಿಟ್ಟು ನೀವು ರಾಜಕೀಯಕ್ಕೆ ಬನ್ನಿ. ನಿಮ್ಮಇಂತಹ ಧ್ವನಿಯನ್ನು ರಾಜಕೀಯದಲ್ಲಿದ್ದು ಹೊರಡಿಸಿ” “ಕ್ವಿನ್, ನಿಜವಾದ ಮಾತು. ದಯವಿಟ್ಟು ಪಾಲಿಟಿಕ್ಸ್‌ಗೆ ಹಿಂತುರುಗಿ” ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.