
ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಹಳೆ ಗಾಂಧಿ ನಗರದ ಬ್ರಿಡ್ಜ್ ಮೇಲೆ ಸಂಭವಿಸಿದೆ. ದೀಪಾವಳಿ ಹಬ್ಬಕ್ಕೆ ಬೆಳಗಾವಿಯ ಮಾರ್ಕೆಟ್‍ನಲ್ಲಿ ಬಟ್ಟೆ ಖರೀದಿ ಮಾಡಿ ವಡಗಾಂವ ಮಾವನ ಮನೆಗೆ ಭೇಟಿ ಕೊಟ್ಟು ಬಳಿಕ ತಮ್ಮ ಊರು ಹುಕ್ಕೇರಿ ತಾಲೂಕಿನ ಹತ್ತರಗಿಗೆ ತಂದೆಯ ಜೊತೆಗೆ ಬೈಕ್ ಮೇಲೆ ಹೊರಟಿದ್ದ 5 ವರ್ಷದ ಮಗುವಿನ ಕೊರಳಿಗೆ ಗಾಳಿಪಟದ ಮಾಂಜಾ ದಾರ ಸಿಕ್ಕ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮಗು ಸಾವನ್ನಪ್ಪಿದೆ. ರವಿವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ವರ್ಧನ್ ಈರಣ್ಣ ಬೇಲಿ ಸಾವನ್ನಪ್ಪಿರುವ ದುರ್ದೈವಿ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸಂಬಂಧ ಕೇಸ್ ದಾಖಲಾಗಿದೆ. ಒಟ್ಟಿನಲ್ಲಿ ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸಬೇಕಿದ್ದ ಕುಟುಂಬದಲ್ಲಿ ಮಗುವಿನ ಧಾರುಣ ಸಾವಿನಿಂದ ದಿಗ್ಭ್ರಮೆಗೊಂಡಿದ್ದು, ಆಕ್ರಂದನ ಮುಗಿಲು ಮುಟ್ಟಿತ್ತು. ಈ ಮಾಂಜಾ ದಾರಕ್ಕೆ ಅದೇಷ್ಟೋ ಜೀವಗಳು ಬಲಿಯಾಗಿವೆ. ತಕ್ಷಣವೇ ಈ ಮಾಂಜಾ ದಾರವನ್ನು ನಿಷೇಧಿಸುವ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ ಇನ್ನು ಅದೇಷ್ಟು ಜೀವಗಳು ಬಲಿಯಾಗುತ್ತದೆಯೋ ಆ ದೇವರಿಗೆ ಗೊತ್ತು