November 22, 2024

ತಾಯಿಯೊಬ್ಬಳು ಹೆತ್ತ ಮಕ್ಕಳನ್ನು ಬಿಟ್ಟು 25 ವರ್ಷದ ಯುವಕನ ಜೊತೆಗೆ ಓಡಿ ಹೋದ ಘಟನೆ ಬೆಳಗಾವಿ ನಗರದ ಗಣೇಶಪುರದಲ್ಲಿ ಬೆಳಕಿಗೆ ಬಂದಿದೆ. ಸದ್ಯ ತಾಯಿಯಿಂದಾಗಿ ಮೂರು ಮಕ್ಕಳು ಬೀದಿಗೆ ಬಂದಿದ್ದು, ನ್ಯಾಯ ಕೊಡಿಸುವಂತೆ ಮಕ್ಕಳು ಬೆಳಗಾವಿ ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದಾರೆ.

ವಿನಾಯಕ ಕೊಲ್ಕಾರ ಎಂಬ ಯುವಕನ ಜೊತೆಗೆ ಮಹಿಳೆ ಓಡಿ ಹೋಗಿದ್ದಾಳೆ. ಹೆತ್ತ ಮಕ್ಕಳನ್ನು ಬೀದಿಗೆ ಬಿಟ್ಟು ಬೇರೆ ಯುವಕನ ಜೊತೆಗೆ ನೆಲೆಸಿದ್ದಾಳೆ. ಸದ್ಯ ಮೂವರು ಮಕ್ಕಳು ತಾಯಿ ಕಾಣೆಯಾಗಿದ್ದಾಳೆಂದು ಕ್ಯಾಂಪ್ ಠಾಣೆಯಲ್ಲಿ ದೂರು ನೀಡಿದ್ದಾರೆ.

3 ಮಕ್ಕಳು ಅನಾಥ

ಸರ್ಕಾರಿ ನೌಕರಿಯಲ್ಲಿದ್ದ ಗಂಡನ ಅಕಾಲಿಕ ನಿಧನದ ಬಳಿಕ ಮಹಿಳೆ ಅನುಕಂಪದ ನೌಕರಿ ಗಿಟ್ಟಿಸಿಕೊಂಡಿದ್ದಳು. ಗಂಡ ತೀರಿ ಹೋದ ಬಳಿಕ 3 ಮಕ್ಕಳು ತಾಯಿ ಆಶ್ರಯದಲ್ಲಿದ್ದ ಬೆಳೆದರು. ಆದರೆ ಕೆಲ ತಿಂಗಳಿಂದ ಮಕ್ಕಳನ್ನು ಬಿಟ್ಟು ಮಹಿಳೆ ಯುವಕನ ಜೊತೆಯಲ್ಲಿ ನೆಲೆಸಿದ್ದಾಳೆ. ತಾಯಿಗಾಗಿ ಮೂವರು ಮಕ್ಕಳು ಹಾಗೂ ಅಜ್ಜಿ ಪರಿತಪಿಸುತ್ತಿದ್ದಾರೆ. ಆದರೆ ಹೆತ್ತ ತಾಯಿಗೆ ಮಕ್ಕಳ ಕೂಗು ಕೇಳಿಸುತ್ತಿಲ್ಲ ಅನ್ನೋದೇ ವಿಪರ್ಯಾಸ.

Leave a Reply

Your email address will not be published. Required fields are marked *