November 19, 2024

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಸಂತ್ರಸ್ತೆ ಅಪಹರಿಸಿದ ಪ್ರಕರಣ ದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಭವಾನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಮಂಗಳವಾರ ಪ್ರಕಟಿಸಿ, ಪೊಲೀಸರು ವಿಚಾರಣೆಗೆ ಕರೆದಾಗ ಮಾತ್ರ ಹಾಸನ ಮತ್ತು ಮೈಸೂರು ಜಿಲ್ಲೆಗೆ ಹೋಗಬೇಕು ಎಂದು ಷರತ್ತು ವಿಧಿ ಸಿದೆ. ”ಆರೋಪಿಗಳನ್ನು ವಿಚಾರಣೆ ಗಾಗಿ ವಶಕ್ಕೆ ಕೋರಿದಾಗ ಯಾವ ಕಾರಣಕ್ಕೆ ಪಡೆಯುವ ಅಗತ್ಯವಿದೆ ಎಂಬುದನ್ನು ನ್ಯಾಯಾಲಯಗಳು ಪರೀಕ್ಷಿಸುವಂತಿಲ್ಲ ಎಂಬ ಸರಕಾರಿ ವಕೀಲರ ವಾದ ಸುಪ್ರೀಂಕೋರ್ಟ್ ಆದೇಶಗಳಿಗೆ ಏರು ದ್ಧವಾಗಿದೆ. ಅಲ್ಲದೆ, ವಿಶ್ವ ಸಂಸ್ಥೆ ಬ್ಯಾಂಕಾಕ್ ಸಮ್ಮೇಳನದ ಒಪ್ಪಂದಗಳಿಗೂ ತದ್ವಿರುದ್ಧ ವಾಗಿದೆ,” ಎಂದು ನ್ಯಾಯಪೀಠ ತಿಳಿಸಿದೆ.

”ಪೊಲೀಸರು ಮೂರು ದಿನಗಳ ಅವಧಿ ಯಲ್ಲಿ ಒಟ್ಟು 85 ಪ್ರಶ್ನೆಗಳನ್ನು ಕೇಳಿದ್ದಾರೆ. ಎಲ್ಲ ಪ್ರಶ್ನೆಗಳಿಗೂ ಅರ್ಜಿದಾರರು ಉತ್ತರಿಸಿದ್ದಾರೆ. ಪೊಲೀಸರು ಬಯಸಿದಂತೆ ಆರೋಪಿಗಳು ಉತ್ತರಿಸಬೇಕು ಎಂದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ,” ಎಂದು ತಿಳಿಸಿದೆ.

“ಅಪಹರಣದ ಬಳಿಕ ಸಂತ್ರಸ್ತೆಗೆ ಬಟ್ಟೆ ನೀಡಿಲ್ಲ, ತಿನ್ನಲು ಆಹಾರ ಒದಗಿಸಿಲ್ಲವೆಂದು ಪ್ರಾಸಿಕ್ಯೂಷನ್ ವಕೀಲರು ವಾದಿಸಿದ್ದಾರೆ. ಆದರೆ, ಸಂತ್ರಸ್ತ ಮ್ಯಾಜಿಸ್ಟ್ರೇಟ್ ನ್ಯಾಯಾಲ ಯದ ಮುಂದೆ ಸಿಆರ್‌ಪಿಸಿ ಸೆಕ್ಷನ್ 141 ರಡಿ ಹೇಳಿಕೆ ನೀಡುವ ಸಂದರ್ಭದಲ್ಲಿ ಭವಾನಿ ಅಕ್ಕ ಊಟ ಮತ್ತು ಬಟ್ಟೆಗಳನ್ನು ಕಳುಹಿಸಿದ್ದರೆಂದು ಹೇಳಿಕೆ ನೀಡಿರುವ ಅಂಶ ದಾಖಲಾಗಿದೆ. ಈ ಪ್ರಕ್ರಿಯೆ ಸಂತ್ರಸ್ತೆಯನ್ನು ಅಪಹರಣ

ಮಾಡಲಾಗಿದೆ ಎಂದು ಹೇಳಲಾಗದು.” ಎಂದು ನ್ಯಾಯಪೀಠ ತಿಳಿಸಿದೆ.

‘ಮಹಿಳೆ ಆರೋಪಿಯಾಗಿದ್ದಾಗ ಮಾಧ್ಯಮಗಳು ಸಂಯಮ ಪಾಲಿಸಬೇಕು. ದಿನಪತ್ರಿಕೆಗಳೂ ಸೇರಿದಂತೆ ಮಾಧ್ಯಮ ಗಳನ್ನು ಸಾಮಾನ್ಯ ಜನ ಗಮನಿಸುತ್ತಾರೆ. ಆ ಬಗ್ಗೆ ಹಲವು ಸಂದರ್ಭಗಳಲ್ಲಿ ಚರ್ಚೆ ನಡೆಸುತ್ತಾರೆ. ಆದರೆ, ಅವರು ಪ್ರಕರಣ ಕುರಿತ ದಾಖಲೆಗಳನ್ನು ಪರಿಶೀಲಿಸಿರು ವುದಿಲ್ಲ ಮಾಧ್ಯಮಗಳ ಚರ್ಚೆ ನೋಡಿ ಆರೋಪಿಯನ್ನು ಅಪರಾಧಿ ಎಂದು ಹೇಳು ವುದಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗಾಗಿ, ಯಾವುದೇ ಪ್ರಕರಣ ದಲ್ಲಿ ಮಹಿಳೆ ಆರೋಪಿ ಯಾಗಿದ್ದಾಗ ಆ ಕುರಿತಂತೆ ಮಾಧ್ಯ ಮಗಳು ಸಂಯಮ ಪಾಲಿಸಬೇಕು. ಆ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು,” ಎಂದು ಹೇಳಿದೆ. “ಅಲ್ಲದೆ, ಅಮೆರಿಕ ಸಂವಿಧಾನ ದಲ್ಲಿ ತಿದ್ದುಪಡಿ ತಂದಿದ್ದು, ಮಾಧ್ಯಮ ವಿಚಾರಣೆಯನ್ನು ನಿರ್ಬಂಧಿಸಲಾಗಿದೆ. ಮಾಧ್ಯಮಗಳ ವಿಚಾರಣೆ ನಿರ್ಬಂಧಿಸಲು ಇದು ಸೂಕ್ತ ಸಮಯ,” ಎಂದು ಆದೇಶದಲ್ಲಿ ಅಭಿಪ್ರಾಯಪಡಲಾಗಿದೆ.

ಜಾಮೀನಿಗೆ ಕಾರಣ ವಿವರಿಸಿದ ಕೋರ್ಟ್
ಮಹಿಳೆ ಕುಟುಂಬದ ಕೇಂದ್ರಬಿಂದು: ”ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಕುಟುಂಬದ ಆಧಾರ. ಅಂತಹ ಮಹಿಳೆಯನ್ನು ಬಂಧಿಸಿದಲ್ಲಿ ಇಡೀ ಕುಟುಂಬ ತೊಂದರೆಗೆ ಸಿಲುಕಲಿದೆ. ಹೀಗಾಗಿ ಮಹಿಳೆಯನ್ನು ಬಂಧಿಸಲು ವಾರಂಟ್ ಜಾರಿ ಮಾಡಿದ ಬಳಿಕ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತಿಲ್ಲ ಎನ್ನಲಾಗದು. ಇದು ಪ್ರಕರಣದಲ್ಲಿ ಅಡಗಿರುವ ಸಾರಾಂಶ ಮತ್ತು ಸಂದರ್ಭಕ್ಕೆ ಅನುಗುಣವಾಗಿರಲಿದೆ. ಹಾಗಾಗಿ, ತನಿಖಾ ಸಂಸ್ಥೆ ಮಹಿಳೆಯನ್ನು ಕಸ್ಟಡಿ ವಿಚಾರಣೆಗೆ ಕೇಳುವಾಗ ಸೂಕ್ತ ಎಚ್ಚರಿಕೆಯಿಂದ ಇರಬೇಕು,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ

Leave a Reply

Your email address will not be published. Required fields are marked *