ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಾಕಷ್ಟು ನಿಗೂಢಗಳನ್ನ ಹೊಂದಿದೆ. ಇನ್ನೂ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನ ಕಲೆಹಾಕಲಾಗುತ್ತಿದೆ. ಕೊಲೆ ಪ್ರಕರಣದ ಆರೋಪಿಗಳ ಹೇಳಿಕೆ ದಾಖಲಿಸಿದ ಪೊಲೀಸ್ರು, ಆರೋಪಿ ದರ್ಶನ್ , ಹಾಗೂ ಪವಿತ್ರಗೌಡ ಸೇರಿದಂತೆ ಎಲ್ಲರ ಹೇಳಿಕೆ ದಾಖಲಿಸಿದ್ದಾರೆ.ಇನ್ನೂ ಸ್ಪಾಟ್ ಮಹಜರ್ ಮುಗಿದ ಬಳಿಕ ಎಲ್ಲಾ ಆರೋಪಿಗಳ ಹೇಳಿಕೆಯನ್ನ ಪೊಲೀಸರು ದಾಳಲಿಸಿದ್ದಾರೆ. ಹಾಗಾದ್ರೆ ಕೊಲೆ ಆರೋಪಿಗಳು ನೀಡಿರಬಹುದಾದ ಸ್ಟೇಟ್ ಮೆಂಟ್ ಏನು ಅನ್ನೊದನ್ನ ನೋಡ್ತಾ ಹೋಗೋದಾದರೆ ,
ಎ1 . ಪವಿತ್ರ ಗೌಡ
* ರೇಣುಕಸ್ವಾಮಿ ಅಶ್ಲೀಲ ಫೋಟೊ ಮೆಸೇಜ್ ಗಳನ್ನ ಪವನ್ ಗೆ ಕಳಿಸಿದ್ದೆ
* ದರ್ಶನ್ ಗೆ ಈ ವಿಚಾರ ಗೊತ್ತಾಗಬಾರದು ಅಂತಾ ಹೇಳಿದ್ದೆ
* ದರ್ಶನ್ ಗೆ ಈ ವಿಚಾರ ಗೊತ್ತಾದ್ರೆ ಏನಾದ್ರು ಅನಾಹುತ ಆಗಬಹುದು ಅಂತಾ ಹೇಳಿದ್ದೆ
* ನಂಗೆ ಕೊಲೆ ಮಾಡ್ತಾರೆ ಅಂತಾ ಸಣ್ಣ ಕಲ್ಪನೆಯೂ ಇರಲಿಲ್ಲ
* ಕೊಲೆ ಮಾಡ್ತಾರೆ ಅಂದ್ರೆ ನಾನೆ ಕಂಪ್ಲೆಂಟ್ ಕೊಟ್ಟು ಸರಿ ಮಾಡಿಕೊಳ್ತಿದ್ದೆ
ಎ2 ದರ್ಶನ್
* ಪವನ್ ನಿಂದ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿರೋದು ಗೊತ್ತಾಯ್ತು
* ರೇಣುಕಾಪ್ರಸಾದ್ ನನ್ನ ಕರೆತರುವಂತೆ ರಾಘವೇಂದ್ರನಿಗೆ ಸೂಚಿಸಿದೆ
* ಶನಿವಾರ ಸಂಜೆ ರೇಣುಕಾಪ್ರಸಾದ್ ನ ಶೆಡ್ ನಲ್ಲಿ ಭೇಟಿಯಾದೆ
* ಇನ್ನೊಂದ್ ಸಲ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ್ರೆ ಸರಿ ಇರಲ್ಲ ಅಂತಾ ವಾರ್ನ್ ಮಾಡಿದೆ
* ದುಡ್ಡು ಕೊಟ್ಟು ಊಟ ಮಾಡ್ಕೊಂಡ್ ಊರು ಸೇರುವಂತೆ ಹೇಳಿ ಹೊರಟೋದೆ
* ನಾನು ಈ ಕೊಲೆಯನ್ನು ಮಾಡಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ ಅಂತಾ ಸ್ಟೇಟ್ ಮೆಂಟ್
ಎ3 ಪವನ್
* ರೇಣುಕಾಪ್ರಾಸದ್ ಪವಿತ್ರ ಅಕ್ಕನಿಗೆ ಅಶ್ಲೀಲ ಮೆಸೇಜ್ ಮಾಡ್ತಿದ್ದ
* ಅಕ್ಕ, ಇದ್ಯಾರು ಪತ್ತೆ ಮಾಡು ಅಂತಾ ಹೇಳಿದ್ರು
* ಪವಿತ್ರ ಗೌಡ ಹೆಸರಲ್ಲಿ ರೇಣುಕಸ್ವಾಮಿ ಜೊತೆ ಚಾಟ್ ಮಾಡ್ತಾ ಮಾಡ್ತಾ ಮೊಬೈಲ್ ನಂ ಪಡೆದುಕೊಂಡೆ
* ನಾನು ವಿಚಾರವನ್ನ ದರ್ಶನ್ ಗೆ ಹೇಳಿದೆ
* ಆ ಬಳಿಕ ರೇಣುಕಾಸ್ವಾಮಿಯನ್ನ ಕರೆಸಿ ಶೆಡ್ ನಲ್ಲಿ ಎಲ್ಲರೂ ಸೇರಿ ಹಲ್ಲೆ ನಡೆಸಿದ್ವಿ
* ರೇಣುಕಾಸ್ವಾಮಿ ಮೂರ್ಚೆ ಹೋಗಿರಬಹುದು ಅನ್ಕೊಂಡೊ. ಆದ್ರೆ ಸತ್ತು ಹೋಗಿದ್ರು.
* ಭಯ ಹುಟ್ಟಿಸಬೇಕು ಸಾಯಿಸುವ ಉದ್ದೇಶವಿರಲಿಲ್ಲ ಅಂತಾ ಪವಮ್ ನಿಂದ ಸ್ಟೇಟ್ ಮೆಂಟ್
ಎ4 ರಾಘವೇಂದ್ರ
* ಚಿತ್ರದುರ್ಗ ತೂಗದೀಪ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದೇನೆ
* ದರ್ಶನ್ ಸಾರ್ ಒಂದು ನಂಬರ್ ಕೊಟ್ಟು ಈ ವ್ಯಕ್ತಿಯನ್ನ ಪತ್ತೆ ಮಾಡುವಂತೆ ಹೇಳಿದ್ರು
* ನಂಬರ್ ಸಿಕ್ಕಿದ್ರಿಂದ ರೇಣುಕಾಸ್ವಾಮಿಯನ್ನ ಆರಾಮಾಗಿ ಪತ್ತೆ ಮಾಡಿದ್ದೆ
* ರೇಣುಕಾಸ್ವಾಮಿಯನ್ನ ೨ ದಿನ ವಾಚ್ ಮಾಡಿ ಫಾರ್ಮಿಸಿಗೆ ಬರುವ ವೇಳೆ ಮಾತನಾಡಬೇಕು ಅಂತಾ ಕರೆದುಕೊಂಡು ಬಂದೆ
* ಶನಿವಾರ ಮೂರು ಗಂಟೆ ವೇಳೆಗೆ ಪಟ್ಟಣಗೆರೆಯ ವಿನಯ್ ಶೆಡ್ ಒಳಗೆ ಕರೆದುಕೊಂಡು ಹೋದೆ
* ಅಷ್ಟರಲ್ಲಿ ಅಲ್ಲಿ ಆಗಾಗಲೆ ಸಾಕಷ್ಟು ಜನ ಇದ್ದು ರೇಣುಕಾಸ್ವಾಮಿಯನ್ನ ನೋಡಿದ ಕೂಡಲೆ ಹಲ್ಲೆ ಮಾಡಿದ್ರು
* ನಮ್ಮ ಬಾಸ್ ಹೆಂಡ್ತಿಗೆ ಮೆಸೇಜ್ ಮಾಡ್ತೀಯೇನೊ ಅಂತಾ ಎಲ್ರೂ ಸೇರಿ ಹೊಡೆದ್ವಿ
* ಸತ್ತು ಹೋಗ್ತಾನೆ ಅಂತಾ ಅಂದುಕೊಂಡಿರಲಿಲ್ಲ ಅಂತಾ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ.