ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಅನುಮಾನ ಶುರುವಾಗಿದೆ.ನೂತನ ಡಿಸಿಪಿ ನೇಮಕವಾದರು ಪುಂಡು ಪೊಕರಿಗಳ ದೌರ್ಜನ್ಯ ,ರೌಡಿಗಳ ಅಟ್ಟಹಾಸ ನಿಲ್ಲುತ್ತಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಹೌದು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಬ್ಬೂರ ಬಳಿ ಕೆಲಸ ಮಾಡುತ್ತಿದ್ದ ಬಿಹಾರಿ ಸೆಕ್ಯೂರಿಟಿ ಗಾರ್ಡ್ ಹಾಗು ಇನ್ನೋರ್ವ ವ್ಯಕ್ತಿಯನ್ನು ಹಾಡುಹಗಲೇ ಗುಂಪುಂದು ಹಲ್ಲೆ ಮಾಡಿ ನಾಲ್ಕೈದು ಬಾರಿ ಕೊಲೆಗೆ ಯತ್ನ ನಡೆಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ
ಎರಡು ಬೈಕ್ ಗಳಲ್ಲಿ ಬಂದ ರೌಡಿಗಳ ಗುಂಪು ಇಬ್ಬರನ್ನೂ ಮನ ಬಂದಂತೆ ಥಳಿಸಿ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನ ಮಾಡಿ ಪರಾರಿಯಾಗಿದ್ದಾರೆ ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ ಆದ್ರೆ ಇದುವರೆಗೂ ಆರೋಪಿಗಳ ಬಂಧನ ಆಗಿಲ್ಲ ಹಾಗು ಆರೋಪಿಗಳು ಪತ್ತೆ ಕೂಡ ಆಗಿಲ್ಲಎಂದು ತಿಳಿದು ಬಂದಿದೆ.ಈ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕಿದ್ದು ಸಾರ್ವಜನಿಕರಲ್ಲಿ ಮನೆ ಮಾಡಿರುವ ಆತಂಕವನ್ನು ದೂರ ಮಾಡಬೇಕಿದೆ