ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ
ತುರನೂರಯಿಂದ ವಾಯಾ ಗೊಡಚಿ ಚಂದರಗಿವರಿಗೆ ಸಾರ್ವಜನಿಕರ ಈ ಸಮಸ್ಯೆ ಕೇಳೋರು ಯಾರು ?
ಇದೇ ರಸ್ತೆಯ ಮೇಲೆ ಶಾಸಕರಾದ ಮಹಾದೇವಪ್ಪ ಯಾದವಾಡ ಇವರು ಸಾಕಷ್ಟು ಬಾರಿ ಹೋಗತಾರೆ, ಬರುತ್ತಾರೆ ಆದರೆ ಅವರ ಗಮನಕ್ಕೆ ಬಂದಿಲ್ಲವೇ ?
ಇದುವರೆಗೂ ರಸ್ತೆ ಸುಧಾರಣೆ ಮಾಡದೆ ಇರುವುದು ಬೇಸರದ ಸಂಗತಿಯಾಗಿದೆ.
ಪ್ರತಿ ವರ್ಷ ಈ ರಸ್ತೆಯನ್ನು ದುರಸ್ತಿ ಮಾಡಿರುತ್ತಾರೆ ದುರಸ್ತಿ ಮಾಡಿದರು ಕೂಡ ಯಾವುದೇ ಪ್ರಯೋಜನ ಇಲ್ಲ ಮಳೆಗಾಲ ದಿನದಂದು ರಸ್ತೆ ಯಾವುದು ತೆಗ್ಗು ದಿನ್ನಿ ಯಾವುದು ಗೊತ್ತಾಗದೆ ವಾಹನ ಸವಾರರಿಗೆ ಸಾಕಷ್ಟು ತೊಂದರೆ ಆಗಿದ್ದು ಇದುವರೆಗೂ ರಸ್ತೆ ದುರಸ್ತಿ ಮಾಡದೆ ಇರುವುದು ಬೇಸರದ ಸಂಗತಿಯಾಗಿದೆ.
ತುರನೂರಯಿಂದ ಸಂಪರ್ಕ ಕಲ್ಪಿಸುವ ಚಂದರಗಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ದೊಡ್ಡ ಪ್ರಮಾಣದ ತಗ್ಗು – ಗುಂಡಿಗಳು ಬಿದ್ದಿದ್ದು ಸಂಚಾರಕ್ಕೆ ಸರ್ಕಸ್ ಮಾಡುವಂತಾಗಿದೆ .
ತುರ್ತಾಗಿ ಆಸ್ಪತ್ರೆಗೆ ಬರುವದು ಕಷ್ಟ, ಬಂದರು ರೋಗಿ ಅಲೆ ಹರ ವೊ ಹರ
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು , ಜನಪ್ರತಿನಿಧಿಗಳು ಕಣ್ಣೆರೆದು ನೋಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ .
ವಾಹನ ಸವಾರರಿಗೆ ಹಾಗೂ ರಸ್ತೆ ಮೇಲೆ ಸಂಚರಿಸುವ ಸಾರ್ವಜನಿಕರು ಸಂಚಾರಕ್ಕೆ ಪರದಾಡುವಂತಾಗಿದೆ ಹಲವು ವರ್ಷಗಳಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಸಂಬಂಧಪಟ್ಟವರು
ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಸ್ತೆಯಲ್ಲಿ ನೀರು ನಿಲ್ಲುತ್ತಿದೆ ಇಲಾಖಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ . ದಿನನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚರಿಸುವ ವೇಳೆ ಆಯತಪ್ಪಿ ಬಿದ್ದು ಅನಾಹುತ ಸಂಭವಿಸಿದ ಸಾಕಷ್ಟು ಉದಾಹರಣೆಗಳಿವೆ.
ದ್ವಿಚಕ್ರ ವಾಹನ ಸವಾರರಿಗೂ ಮಾರಕವಾಗಿ ಪರಿಗಣಿಸಿದ್ದು ಸ್ವಲ್ಪ ಆಯಾ ತಪ್ಪಿದರೂ ಬೀಳುವಂತಾಗಿದೆ .
ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿದಾಗ ಉಡಪೆ ಉತ್ತರ ನೀಡುತ್ತಿದ್ದಾರೆ ಎಂದು ಸುನ್ನಾಳ ಗ್ರಾಮಪಂಚಾಯತ್ ಸದಸ್ಯರಾದ ಹಣಮಂತ ಕೋಟಿಗೆ ಆರೋಸಿದ್ದಾರೆ.