
ಹಜರತ ಸಜ್ಜಾದ ನೊಮಾನಿ ಇವರ ಛತ್ರ ಛಾಯೆಯಲ್ಲಿ ನಡೆಯುತ್ತಿರುವ ರೆಹಮಾನ್ ಫೌಂಡೇಶನ್ ಮಾನವೀಯತೆಯ ಕಡೆಗೆ ಒಂದು ದೊಡ್ಡ ಹೆಜ್ಜೆ ಹಾಕಿದೆ. ರೆಹಮಾನ್ ಫೌಂಡೇಶನಡಿಯಲ್ಲಿ ನಡೆಯುತ್ತಿರುವ ನೊಮಾನಿ ಆಸ್ಪತ್ರೆ, ನೊಮಾನಿ ಮೆಡಿಕಲ್, ನೊಮಾನಿ ಲ್ಯಾಬ್, ನೊಮಾನಿ ನರ್ಸಿಂಗ್ ಇನ್‌ಸ್ಟಿಟ್ಯೂಟ್‌ನ ಯಶಸ್ಸಿನ ನಂತರ ಇದೀಗ ನೊಮಾನಿ ಕ್ಲಿನಿಕ್ ನೊಂದ ಜನರ ಅಗತ್ಯಗಳನ್ನು ಪೂರೈಸಲು ಅಮಲಿನಲ್ಲಿ ಬಂದಿದೆ. ಈ ಕ್ಲಿನಿಕ್ ನ ವಿಶಿಷ್ಟತೆ ಏನಂದರೆ ಇಲ್ಲಿ ರೋಗಿಗಳಿಗೆ ಕೇವಲ 10 ರೂಪಾಯಿಗೆ ಚಿಕಿತ್ಸೆ ನೀಡಲಾಗುತ್ತದೆ. 10 ರೂಪಾಯಿಗೆ ತಪಾಸಣೆ ಜೊತೆಗೆ ಔಷಧಗಳನ್ನೂ ನೀಡಲಾಗುವುದು. ರಹಮಾನ ಫೌಂಡೇಷನ್ ನ ಈ ನಡೆಗೆ ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಕ್ಲಿನಿಕ್ ಅನ್ನು ಅಕ್ಟೋಬರ್ 17 ರಂದು ಸಂಜೆ 7 ಗಂಟೆಗೆ ಹಜರತ್ ಸಜ್ಜಾದ ನೊಮಾನಿ ಉದ್ಘಾಟಿಸಿದರು. ಈ ವೇಳೆ ಬೆಳಗಾವಿ ಉತ್ತರದ ಮಾಜಿ ಶಾಸಕ ಫಿರೋಜ್ ಸೇಠ್ ಮತ್ತು ಅಂಜುಮನೆ ಇಸ್ಲಾಂ ಜಿಲ್ಲಾ ಬೆಳಗಾವಿಯ ಅಧ್ಯಕ್ಷರಾದ ಆಸಿಫ್ ಅಲಿಯಾಸ್ ರಾಜು ಸೇಠ್ ಉಪಸ್ಥಿತರಿದ್ದರು. ಫಿರೋಜ್ ಸೇಠ್ ಮಾಧ್ಯಮದವರೊಂದಿಗೆ ಮಾತನಾಡಿ, ಇವರ ಈ ಕೆಲಸ ಅಪ್ಪಟ ಮಾನವೀಯತೆ ಯನ್ನು ಯೆತ್ತಿ ಹಿಡುಯುವ ಕೆಲಸವಾಗಿದೆ ಎನ್ನುತ್ತಾ, ಈ ಕ್ಲಿನಿಕ್‌ನ ಸದುಪಯೋಗವನ್ನು ಜನತೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.