August 19, 2025
medical camp kaf

ಈದ್ ಮಿಲಾದ ಹಬ್ಬದ ಅಂಗವಾಗಿ ಖತೀಬೆ ಆಜಂ ಫೌಂಡೇಶನ ವತಿಯಿಂದ ನ್ಯೂ ಗಾಂಧಿನಗರ ಮುಖ್ಯರಸ್ತೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ನ್ಯೂ ಗಾಂಧಿ ನಗರ, ಅಮನ್ ನಗರ, ಉಜ್ವಲ್ ನಗರ, ಆಜಾದ್ ನಗರ, ಓಲ್ಡ್ ಗಾಂಧಿ ನಗರ ಸೇರಿದಂತೆ ಹಲವು ಸ್ಥಳಗಳಿಂದ ಫಲಾನುಭವಿಗಳು ಬಂದಿದ್ದರು. ಈ ವೈದ್ಯಕೀಯ ಶಿಬಿರದಲ್ಲಿ ಥೈರಾಯ್ಡ್, ಬಿಪಿ ಶುಗರ್, ಹಿಮೋಗ್ಲೋಬಿನ್ ತಪಾಸಣೆ ಜತೆಗೆ ಹಿಜಾಮಾ ಶಿಬಿರ ಹಾಗೂ ಮಹಿಳೆಯರಿಗೆ ವಿಶೇಷ ತಪಾಸಣೆ ವ್ಯವಸ್ಥೆ ಮಾಡಲಾಗಿತ್ತು. ಡಾಕ್ಟರ್ ಸದ್ರೋದ್ದೀನ್ ಗದಗವಾಲೆ ಅವರ ನೇತೃತ್ವದಲ್ಲಿ ಈ ಭಾಗದ ಹಲವು ವೈದ್ಯರು ಈ ಶಿಬಿರದಲ್ಲಿ ತಮ್ಮ ಸಮಯವನ್ನು ನೀಡಿ ಈ ಶೀಬರನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *