ಹುಬ್ಬಳ್ಳಿ : ಸ್ವಂತ ಮಗಳ ಭೀಕರ ಕೊಲೆ ನಂತರ ರಾತ್ರೋ ರಾತ್ರಿ ರಾಜ್ಯವ್ಯಾಪಿ ಸಾಕಷ್ಟು ಪ್ರಚಾರ ಪಡೆದುಕೊಂಡ ನಿರಂಜನ ಹಿರೇಮಠ ತಮ್ಮ ಪ್ರಚಾರದ ಖಯಾಲೆಯಿಂದ ವಿಪರೀತ ಮಾದ್ಯಮ ಪ್ರಿಯರು ಎನ್ನುವಂತೆ ಬಿಂಬಿತರಾಗಿದ್ದಾರೆ. ಚುನಾವಣೆ ಸಮಯದಲ್ಲಿ ಬಿಜೆಪಿ ಪಕ್ಷಕ್ಕೆ ವರದಾನ ಎನ್ನುವಂತೆ ನೇಹಾ ಕೊಲೆಯನ್ನು ಬಳಸಿಕೊಳ್ಳಲಾಯಿತು. ಇದಕ್ಕೆ ಪರೋಕ್ಷವಾಗಿ ನೇಹಾ ತಂದೆ ತಮ್ಮ ನಿರಂಜನ ಹಿರೇಮಠ ಹೇಳಿಕೆಗಳಿಂದ ಕೂಡ ಬೆಂಬಲ ನೀಡುತ್ತಲೇ ಬಂದರು.
ಸ್ಥಳೀಯ ಸಣ್ಣ ಪುಟ್ಟ ರಾಜಕಾರಣಿಗಳು, ರಾಜ್ಯದ ಕಿರಿಯ ಹಾಗೂ ಹಿರಿಯ ರಾಜಕಾರಣಿಗಳು ಸೇರಿದಂತೆ ರಾಷ್ಟ್ರ ಮಟ್ಟದ ನಾಯಕರು ಕೂಡ ಹಿರೇಮಠ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲದೆ ಸಾಂತ್ವನ ಹೇಳಿ ನೇಹಾ ಕೊಲೆ ಆರೋಪಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಕೊಡಿಸುವ ಭರವಸೆ ನೀಡಿದರು. ಇದಾದ ಮೇಲೆ ಕೂಡ ಮಾದ್ಯಮಗಳಲ್ಲಿ ನಿರಂಜನ ಹಿರೇಮಠ ಚಾರ್ಮ್ ಕಳೆದುಕೊಳ್ಳಲಿಲ್ಲ. ವಿಪರ್ಯಾಸ ಎನ್ನುವಂತೆ ಹುಬ್ಬಳ್ಳಿಯಲ್ಲಿ ಅಮಾಯಕ ಯುವತಿ ಅಂಜಲಿ ಅಂಬಿಗೇರ ಹತ್ಯೆ ಕೂಡ ಜರುಗಿತು. ಇದಕ್ಕೂ ಮೊದ ಮೊದಲು ನ್ಯಾಯಕ್ಕೆ ಆಗ್ರಹಿಸಿ ಬೀದಿಗಿಳಿದ ನಿರಂಜನ್ ಹಿರೇಮಠ ನಂತರ ಅವರ ನಡೆ ಮೇಲೆ ಸಾರ್ವಜನಿಕರು ಹಾಗು ಪೊಲೀಸ್ ಹಿರಿಯ ಅಧಿಕಾರಿಗಳು ಜಿಗುಪ್ಸೆಗೆ ಒಳಗಾಗುವಂತೆ ಮಾಡಿದೆ ಎನ್ನಲಾಗುತ್ತಿದೆ.
ಅಲ್ಲದೆ ಪ್ರಮುಖವಾಗಿ ಘಟನೆ ನಡೆದ ಸಂದರ್ಭದಿಂದ ಹಿಡಿದು ಇಂದಿನವರೆಗೂ ಪಾಲಿಕೆ ಸದಸ್ಯರು ಹೇಳಿಕೆ ಬದಲಾಯಿಸುತ್ತಿರುವ ಪರಿ ಹಾಗು ತಮ್ಮ ಪಕ್ಷದ ಶಾಸಕರ ಬಗ್ಗೆಯೇ ಆರೋಪ ಮಾಡಿರುವ ರೀತಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸುತ್ತಿದ್ದಾರೆ. ಇನ್ನು ತನಿಖೆ ಸುಗಮವಾಗಿ ಸಾಗುತ್ತಿರುವ ಸಂದರ್ಭದಲ್ಲಿ ಇನ್ನು ಸಂಶಯ ವ್ಯಕ್ತಪಡಿಸಿರುವುದು ತನಿಖಾಧಿಕಾರಿಗಳು ತಲೆನೋವಾಗಿ ಪರಿಣಮಿಸಿದೆ.
ಸದ್ಯ ಅಂಜಲಿ ಅಂಬಿಗೇರ ಹತ್ಯೆ ಆರೋಪಿ ವಿಚಾರಣೆ ನಡೆಯುತ್ತಿದ್ದು ಈ ಪ್ರಕರಣದಲ್ಲಿ ಅಂಜಲಿ ಪರವಾಗಿ ಈ ಹಿಂದೆ ದಾಖಲಾಗಿದ್ದ ಪೋಕ್ಸೋ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಆಸಮಯದಲ್ಲಿ ಆರೋಪಿಯಾಗಿದ್ದ ಯುವಕ ಆ ಸಮಯದಲ್ಲಿ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಸಹಾಯ ಕೋರಿದ್ದ ಎನ್ನುವ ಗುಸುಗುಸು ಶುರುವಾಗಿದ್ದು ಇದೆ ವಿಷಯಕ್ಕೆ ಸಂಬಂಧಪಟ್ಟಂತೆ ದಲಿತ ಸಂಘಟನೆ ಮುಖಂಡರು ಸಿಐಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು.ಅಂಜಲಿ ಹತ್ಯೆಯಿಂದ ಪೋಕ್ಸೋ ಪ್ರಕರಣ ಕೂಡ ಸಡಿಲಗೊಂಡು ನ್ಯಾಯ ಸಿಗುವುದಿಲ್ಲ ಈ ಬಗ್ಗೆ ಕೂಡ ತನಿಖೆ ನಡೆಸುವಂತೆ ಮನವಿ ಸಲ್ಲಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ನೇಹಾ ಹತ್ಯೆಯ ಸಂದರ್ಭದಲ್ಲಿ ನಿರಂಜನ್ ಹಿರೇಮಠ ಕಷ್ಟದಲ್ಲಿ ಕಂಬನಿ ಮಿಡಿದ ಸಾರ್ವಜನಿಕರು ಇದೀಗ ಅವರ ನಡೆಯಿಂದ ಇರಿಸು ಮುರಿಸು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಅಂಜಲಿ ಅಂಬಿಗೇರ ಪ್ರಕರಣದಲ್ಲಿ ಈ ಹಿಂದಿನ ಕೇಸ್ ತಳಕು ಹಾಕಿಕೊಂಡರೆ ಹಿರೇಮಠ ಅವರ ವರ್ಚಸ್ಸು ಕೂಡ ಹಾಳಗುವ ಸಾದ್ಯತೆ ಇದೆ.