August 18, 2025
IMG_20240530_071214

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕೊಲೆ ಹತ್ಯೆಯ ಪ್ರಕರಣದಲ್ಲಿ ಕರ್ತವ್ಯ ಲೋಪದಡಿ ಅಮಾನತ್ತಾಗಿದ್ದ ದಕ್ಷಿಣ ಉಪ ವಿಭಾಗದ ಎಸಿಪಿ ವಿಜಯಕುಮಾರ ತಳವಾರ ಸ್ಥಳಕ್ಕೆ ಸರ್ಕಾರ ಉಮೇಶ ಚಿಕ್ಕಮಠ ಅವರನ್ನು ನೇಮಕ ಮಾಡಿ ಆದೇಶ ಮಾಡಿದೆ. ಸಿಐಡಿಯಲ್ಲಿ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಮೇಶ ಚಿಕ್ಕಮಠ ಅವರನ್ನು ದಕ್ಷಿಣ ಉಪ ವಿಭಾಗದ ಪ್ರಭಾರಿ ಎಸಿಪಿ ಆಗಿ ಆದೇಶ ಮಾಡಿದೆ. ನೇಹಾ ಹಾಗೂ ಅಂಜಲಿ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪದ ಎಸಗಿದ್ದಾರೆ ಎಂದು ಹೆಡ್ ಕಾನ್ಸೆಬಲ್ ಸೇರಿದಂತೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.

Leave a Reply

Your email address will not be published. Required fields are marked *