October 13, 2025
aam admi kittur protest

ಆಮ್ ಆದ್ಮಿ ಪಕ್ಷ ಚನ್ನಮ್ಮನ ಕಿತ್ತೂರು ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಮುಖಂಡರಿಂದ ಚನ್ನಮ್ಮನ ಕಿತ್ತೂರು ತಹಶಿಲ್ದಾರವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಪಂಜಾಬ್ ಮಾದರಿಯ ಹಾಗೆ ರೈತರು ಬೆಳದ ಕಬ್ಬಿಗೆ ಪ್ರತಿ ಟನ್ ಗೆ 3800 ನೀಡಿರುವ ಬೆಲೆಯನ್ನು ನಮ್ಮ ಕರ್ನಾಟಕದ ರೈತರಿಗೂ ಸಹ ವೈಜ್ಞಾನಿಕ ಬೆಲೆ ನೀಡಬೇಕೆಂದು ಒತ್ತಾಯಿಸಿ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಆನಂದ ಹಂಪಣ್ಣವರ ಚನ್ನಮ್ಮನ ಕಿತ್ತೂರು ವಿಧಾನ ಸಭಾ ಕ್ಷೇತ್ರದ ಸಂಯೋಜಕರು ಮಾತನಾಡಿ ಪಂಜಾನಲ್ಲಿ 9ರಿಂದ 10 ಇಳುವರಿ ಇರುವ ಪಂಜಾಬ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ಪ್ರತಿ ಟನ್ ಗೆ 3800 ಬೆಲೆ ನಿಗದಿ ಮಾಡಿದೆ ಆದ್ದರಿಂದ ಕೊಡಲೆ ರಾಜ್ಯ ಸರಕಾರ ಕರ್ನಾಟಕದಲ್ಲಿ 12 ರಿಂದ 16.9 ಇರುವ ರಾಜ್ಯದಲ್ಲಿ ಬೆಂಬಲ ಬೆಲೆ ನೀಡಬೇಕೆಂದು ಕಬ್ಬು ಹಿಡಿದು ವಿನೂತನ ಪ್ರತಿಭಟನೆ ಮಾಡಿದರು ಈ ಒಂದು ಸಂದರ್ಭದಲ್ಲಿ ರೈತಪರ ಹೋರಾಟಗಾರ ದಿ.ಬಾಬಾಗೌಡ ಪಾಟೀಲ ಅವರ ಸುಪುತ್ರ ಈಶಪ್ರಭು ಪಾಟೀಲ ವಿಠಲ ಮಿರಜಕರ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ ಸಂಘಟನಾ ಕಾರ್ಯದರ್ಶಿ ,ನಾಗನಗೌಡ ಪಾಟೀಲ ಜಂಟಿ ಕಾರ್ಯದರ್ಶಿ,ರುದ್ರಪ್ಪ ಹುಣಸಿಕಟ್ಟಿ ಯುವ ಘಟಕದ ಅಧ್ಯಕ್ಷ ಇನ್ನು ಹಲುವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ರುದ್ರಪ್ಪ ಹುಬ್ಬಳ್ಳಿ

Leave a Reply

Your email address will not be published. Required fields are marked *