August 19, 2025
bailhongal lingayat protest

ಪುಟ್ಟ ಸಿದ್ದ ಶೆಟ್ಟಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೈಲಹೊಂಗಲ ದಲ್ಲಿ ಪಂಚಮಸಾಲಿ ಮುಖಂಡ ರಿಂದ ಪ್ರತಿಭಟನೆ,ಮನವಿ.
ಯಾವ ಸಮಾಜದ ಬಗ್ಗೆ ನಮಗೆ ಕೀಳರಿಮೆ ಇಲ್ಲ.
ಯಾವ ಸಮಾಜದ ವಿರುದ್ಧವೂ ನಮ್ಮ ಹೊರಾಟವಿಲ್ಲ.ಆದರೆ ಪಂಚಮಸಾಲಿ ಗಳ ವಿಷಯದಲ್ಲಿ ವಿನಾಕಾರಣ ಕೈ ಹಾಕುತ್ತಿರುವ ಅನ್ಯ ಸಮಾಜದ ಸಮಾಜ ಘಾತುಕ ಶಕ್ತಿಗಳನ್ನು ಸರಕಾರ ಮಟ್ಟ ಹಾಕಬೇಕು.
ಮತ್ತು ಪುಟ್ಟ ಸಿದ್ದ ಶೆಟ್ಟಿ ವಿರುದ್ಧ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು,ಸರಕಾರ ಎಚ್ಚೆತ್ತುಕೊಳ್ಳದೆ ಹೋದಲ್ಲಿ ಸಮಾಜದ ಲಕ್ಷಾಂತರ ಜನ ಬೀದಿಗಿಳಿದು ರಾಜ್ಯಾದ್ಯಂತ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸುತ್ತ,ತಕ್ಷಣ ಪುಟ್ಟ ಸಿದ್ದ ಶೆಟ್ಟಿ ಎಂಬ ವ್ಯಕ್ತಿ ಧರ್ಮ ಧರ್ಮಗಳಲ್ಲಿ ವಿಷ ಬೀಜ ಬಿತ್ತಿ ರಾಜ್ಯದ ಸಾಮರಸ್ಯ ಹಾಳು ಮಾಡುತ್ತಿದ್ದು,ಇಂತವರ ವಿರುದ್ಧ ಸರಕಾರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾನ್ಯ ಉಪವಿಭಾಗಾಧಿಕಾರಿ ಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಶ್ರೀಶೈಲ ಬೊಳನ್ನವರ.ರಾಜು ಜನ್ಮಟ್ಟಿ.ಶಂಕರ ಮಾಡಲಗಿ.ನ್ಯಾಯವಾದಿ ಎಫ.ಎಸ್.ಸಿದ್ದಾನಗೌಡರ ಸೇರಿದಂತೆ ಸಮಾಜದ ಮುಖಂಡರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.
ವರದಿ:ಶಿವು ಜೋಳದ

Leave a Reply

Your email address will not be published. Required fields are marked *