ಧಾರವಾಡ: ಸಿನೀಮಯ ರೀತಿಯಲ್ಲಿ ಬೆನ್ನತ್ತಿ ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಧಾರವಾಡ ಗ್ರಾಮೀಣ ಠಾಣೆ ಮಹಿಳಾ ಪಿಎಸ್ಐ ರೇಣುಕಾ ಐರಾಣಿ ಯಶಸ್ವಿಯಾಗಿದ್ದಾರೆ.
ಮೇ.21 ರಂದು ರಾತ್ರಿ 9-30ರ ಸುಮಾರಿಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಳ್ಳಾವರ ರಸ್ತೆಯ ಮಂಡಿಹಾಳ ಗ್ರಾಮದ ಹತ್ತಿರ 4 ಜನ ದರೋಡೆಕೋರರು ಬೈಕ್ನಲ್ಲಿ ಹೋಗುತ್ತಿದ್ದವನನ್ನು ನಿಲ್ಲಿಸಿ, ಅವನಿಂದ ಮೊಬೈಲ್, ಹಣದ ಪಾಕೀಟ್ನ್ನು ದೋಚಿಕೊಂಡು ಹೋಗುತ್ತಿದ್ದಾಗ, ಸ್ಥಳೀಯರು ಕೂಡಲೇ ಮಹಿಳಾ ಪಿಎಸ್ಐ ರೇಣುಕಾ ಐರಾಣಿ ಅವರಿಗೆ ಕರೆ ಮಾಡಿ, ಘಟನೆ ಕುರಿತು ಹೇಳಿದಾಗ, ತಕ್ಷಣವೇ ಪಿಎಸ್ಐ ರೇಣುಕಾ ಐರಾಣಿಯವರು ತಮ್ಮ ಸ್ವಂತ ಕಾರ್ನಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ದರೋಡೆಕೋರರನ್ನು ಹಿಂಬಾಲಿಸಿ ಇಬ್ಬರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಎಸ್ಐ ರೇಣುಕಾ ಐರಾಣಿಯವರ ಕರ್ತವ್ಯ ನಿಷ್ಠೆ ಮತ್ತು ದೈರ್ಯ ಪ್ರದರ್ಶಿಸಿ, ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗದ್ದರಿಂದ ಅವರ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಅವರು ಬಹುಮಾನವನ್ನು ನೀಡಿ ಗೌರವಿಸಿದ್ದಾರೆ.