October 18, 2024

ಧಾರವಾಡ : ನಗರದ ಸಿಬಿಟಿ ಬಳಿ ಟೆಂಪೊ ಸ್ಟ್ಯಾಂಡ್‌ನಲ್ಲಿದ್ದ ಆಲದ ಮರದ ಬೃಹತ್ ಟೊಂಗೆಯೊಂದು ಕಳಚಿ ಬಿದ್ದಿದ್ದು, ಅನಾಹತವೊಂದು ತಪ್ಪಿದಂತಾಗಿದೆ.

ಈ ಸ್ಥಳದಲ್ಲಿ ನಿತ್ಯ ಜನಜಂಗುಳಿ ತುಂಬಿರುತ್ತದೆ. ಇದೇ ಪ್ರದೇಶದಲ್ಲಿ ಆಲದ ಮರದ ಟೊಂಗೆ ಕಳಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು, ಅರಣ್ಯ ಇಲಾಖೆಯವರು ಹಾಗೂ ಹೆಸ್ಕಾಂನವರು ಭೇಟಿ ನೀಡಿ ಮರದ ಟೊಂಗೆ ತೆರವುಗೊಳಿಸುವ ಕಾರ್ಯ ಮಾಡಿದರು.

Leave a Reply

Your email address will not be published. Required fields are marked *