
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗರ ಕೊಲೆ ಖಂಡಿಸಿ, ಎಬಿವಿಪಿ ವತಿಯಿಂದ ಮಾನವ ಸರಪಳಿ ಮಾಡಿ ನ್ಯಾಯಬೇಕೆಂದು ಪ್ರತಿಭಟನೆ ಮಾಡಿದರು.
ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ಬಳಿ ರಸ್ತೆ ಬಂದ್ ಮಾಡಿ ಎಬಿವಿಪಿ ಕರ್ಯಕರ್ತರಿಂದ ಪ್ರತಿಭಟನೆ ನಡೆಸಿದ್ದು, ರಸ್ತೆ ತಡೆಗೆ ವಿರೋಧ ಮಾಡಿದ ಪೊಲೀಸರು, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುತು. ಅಂಜಲಿ ಕೊಲೆ ವಿರೋಧಿಸಿ ಎಬಿವಿಪಿ ಪ್ರೋಟೆಸ್ಟ್ ಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕೊಲೆ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು.