August 18, 2025
n6087249641715839852364bdca43f8e7994ec65af85ed61a827a54bf73c43c3f4436fe66961886a066e658

ಹುಬ್ಬಳ್ಳಿ: ಅಂಜಲಿ ಕೊಲೆ ಮಾಡಿ ಪರಾರಿಯಾಗಿರುವ ವಿಶ್ವ ಅಲಿಯಾಸ್ ಗಿರಿ 24 ಗಂಟೆ ಕಳೆದರು ಕೂಡಾ ಆತ ಇದು ಇದುವೆರೆಗೂ ಎಲ್ಲಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ.

ಅಂಜಲಿ ಕೊಲೆ ಮಾಡಿದ ನಂತರ ತನ್ನ ಮೊಬೈಲ್ ಸ್ವೀಚ್ ಆಪ್ ಮಾಡಿಕೊಂಡಿರುವ ಆರೋಪಿ ಇದೀಗ ತಲೆ ಮರೆಸಿಕೊಂಡಿದ್ದಾನೆ.ಅಂಜಲಿಯನ್ನು ಕೊಲೆ ಮಾಡಲು ಬಂದಾಗ ನನ್ನ ಜೊತೆ ಮೈಸೂರಿಗೆ ಬಾ ಅಂತಾ ಆಕೆಯನ್ನು ಕರೆದಿದ್ದ. ಹೀಗಾಗಿ ಆರೋಪಿ ಮೈಸೂರಿನಲ್ಲಿ ತಲೆ ಮರೆಸಿಕೊಂಡಿರಬಹುದು ಎಂಬ ನಿಟ್ಟಿನಲ್ಲಿ ಈಗಾಗಲೇ ಒಂದು ತಂಡ ಮೈಸೂರಿನಲ್ಲಿ ಬಿಡುಬಿಟ್ಟಿದೆ.

ಹಾಗೆಯೇ ಇನ್ನೊಂದು ಟೀಮ್ ಕೂಡಾ ಆರೋಪಿ ಸಂಬಂಧಿಕರ ಮನೆ ಮತ್ತು ಆತನ ಸ್ನೇಹಿತರ ಬಳಿ ಆಶ್ರಯ ಪಡೆದಿರಬಹುದು ಎಂಬ ಅನುಮಾನದ ನಿಟ್ಟಿನಲ್ಲಿ ಹುಡುಕುವ ಪ್ರಯತ್ನವನ್ನು ಮಾಡುತ್ತಿದೆ ಸದ್ಯ ಕೊಲೆ ಮಾಡಿ ಪೊಲೀಸರ ನಿದ್ದೆ ಗೇಡಿಸಿರುವ ವಿಶ್ವನನ್ನು ಪೊಲೀಸರು ಯಾವಾಗ ಬಂಧನ ಮಾಡ್ತಾರೆ ಅಂತಾ ಹುಬ್ಬಳ್ಳಿ ಜನ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *