August 18, 2025
IMG-20240516-WA0018

ಹುಬ್ಬಳ್ಳಿ : ನಗರದ ವೀರಾಪೂರ ಓಣಿಯಲ್ಲಿ ಬಡ ಕುಟುಂಬಕ್ಕೆ ಸೇರಿದ ಅಂಜಲಿ ಮೋಹನ ಅಂಬಿಗೇರ ಕೊಲೆ ವಿರೋಧಿಸಿ ಕರ್ನಾಟಕ ರಾಜ್ಯ ಭೋವಿ (ವಡ್ಡರ) ಮಹಾಸಭಾ ವತಿಯಿಂದ ಮಹಿಳೆಯರ ಮತ್ತು ಮಕ್ಕಳ ಮೇಲೆ ಬರ್ಬರ ಕೃತ್ಯ ಎಸಗುವವರ ವಿರುದ್ಧ ಎನಕೌಂಟರ್ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ತಹಶೀಲ್ದಾರವರ ಮುಖಾಂತರ ಮನವಿ ಸಲ್ಲಿಸಲಾಯಿತು.

ಅಪರಾಧಿಗಳಿಗೆ ತತಕ್ಷಣ ವಿಚಾರಣೆ ನಡೆಸಿ ಸ್ಥಳದಲ್ಲಿಯೇ ಎನಕೌಂಟರ ಮಾಡುವ ಕಾನೂನನ್ನು ರಚಿಸಿ ಜಾರಿಗೆ ತರಬೇಕು‌. ಮುಖ್ಯಮಂತ್ರಿಗಳ ನಿಧಿಯಿಂದ ಪರಿಹಾರವನ್ನು ನೀಡಬೇಕು. ಮನವಿಯನ್ನು ಪರಿಗಣಿಸದೆ ಇದ್ದರೆ ಕರ್ನಾಟಕದಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‌ಈ ಸಂದರ್ಭದಲ್ಲಿ ದಿನೇಶ ಭೋಜಗಾರ, ಸುರೇಶ ಕ್ಯಾರಕಟ್ಡಿ, ವಂಗ್ಯಮ್ಮಾ ಜಮಖಂಡಿ, ರಂಗಮ್ಮ ಭೋವಿ, ಕಾಂಚನಾ ದೊಡಮನಿ, ಚಂದಾ ಹರಳ್ಳಿ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *