
ಹುಬ್ಬಳ್ಳಿ: ರಾಜ್ಯಾದ್ಯಂತ ನಾನಾ ರೂಪಗಳಲ್ಲಿ ಆನ್‌ಲೈನ್ ವಂಚನೆ ಹೆಚ್ಚುತ್ತಿದೆ. ಅಂತರ್ಜಾಲದ ದುರ್ಬಳಕೆ ಮಾಡಿಕೊಂಡು, ಬೇರೆ ಬೇರೆ ಮಾರ್ಗಗಳ ಮೂಲಕ ಜನರಿಗೆ ವಂಚಿಸುತ್ತಿರುವ ಕಿಡಿಗೇಡಿಗಳು ಈಗ ಒಂದು ಹೆಜ್ಜೆ ಮುಂದೆ ಹೋಗಿ ಖಾತೆದಾರರ ಬ್ಯಾಂಕ್‌ನ ಆ್ಯಪ್ ನ್ನೇ ಹ್ಯಾಕ್ ಮಾಡಿ ಹಣ ದೋಚುವ ಹಂತಕ್ಕೆ ತಲುಪಿದೆ..
ಹೌದು… ಇತ್ತೀಚೆಗೆ ಕಳೆದ ಒಂದು ವಾರದಲ್ಲಿ ಕೆನರಾ ಬ್ಯಾಂಕ್ ಖಾತೆಯಿಂದ ಕೆಲವು ಅಪರಿಚಿತ ವ್ಯಕ್ತಿಗಳು ಖಾತೆದಾರರ ಕೆನರಾ ಬ್ಯಾಂಕ್ ಆ್ಯಪ್ ನ್ನು ಹ್ಯಾಕ್ ಮಾಡಿ ಹಣವನ್ನು ದೋಚುತ್ತಿರುವ ಬಗ್ಗೆ ಪ್ರಕರಣಗಳು ವರದಿಯಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ತನ್ನ ಖಾತೆದಾರರಲ್ಲಿ ಸೈಬರ್ ಖದೀಮರ ಕುರಿತು ಜಾಗೃತ ವಹಿಸಲು ಸಲಹೆ ನೀಡಿದೆ. ಅಲ್ಲದೇ ಸೈಬರ್ ಆರೋಪಿಗಳನ್ನು ಬಯಲಿಗೆ ಎಳೆಯುವವರೆಗೆ ತಾತ್ಕಾಲಿಕವಾಗಿ ಆ್ಯಪ್ ಮೂಲಕ ಮಾಡುವ ಎಲ್ಲ ವ್ಯವಹಾರಗಳನ್ನು ರದ್ದು ಮಾಡಿ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವ್ಯವಹಾರ ನಡೆಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.