August 19, 2025
IMG_20240515_063557

ಹುಬ್ಬಳ್ಳಿ : ಹುಬ್ಬಳ್ಳಿಯ ಮೆಡಿಕಲ್ ಸ್ಟೋರ್ ಗಳಲ್ಲಿ ಸದ್ದಿಲ್ಲದೆ ನಿಷೇಧಿತ ಮಾಧಕ ವಸ್ತುಗಳ ದಂಧೆ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ.ಕಳೆದ ವರ್ಷ ಅಷ್ಟೇ ಜನತಾ ಬಜಾರ್ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದರು ಇದೀಗ ಇಂತಹದೇ ಮಾದರಿಯ ಪ್ರಕರಣದಲ್ಲಿ ತಮಿಳುನಾಡಿನ ಕೊಯಮತ್ತೂರಿನ ಪೊಲೀಸರು ಓರ್ವ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ

ಚನ್ನಮ್ಮ ಸರ್ಕಲ್ ಬಳಿ ಇರುವ ಕರ್ನಾಟಕ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರದೀಪ್ ಶೆಟ್ಟಿ ಎನ್ನುವ ಆರೋಪಿಯನ್ನು ಪೊಲೀಸರು ಬಂಧಿಸಿ ತಮಿಳುನಾಡಿಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ

ಇನ್ನು ಹುಬ್ಬಳ್ಳಿಯ ಮೆಡಿಕಲ್ ಸ್ಟೋರ್ ಗಳು ಈ ರೀತಿ ದಂಧೆಗೆ ಇಳಿದಿರುವ ಬಗ್ಗೆ ಅಂತಾರಾಜ್ಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು ಆದ್ರೆ ಸ್ಥಳೀಯ ಪೊಲೀಸರು ಈ ಬಗ್ಗೆ ಯಾಕೆ ಸುಮ್ಮನಿದ್ದಾರೆ ಎನ್ನುವ ಸಂಶಯ ಕೂಡ ಕಾಡುತ್ತಿದೆ.ಅವಳಿನಗರದಲ್ಲಿ ಇದು ಎರಡನೇ ಪ್ರಕರಣ ಆಗಿದ್ದು ಇನ್ನಾದರೂ ಪೊಲೀಸ್ ಉನ್ನತ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಡ್ರಗ್ ಮುಕ್ತ ನಗರವನ್ನಾಗಿ ಮಾಡುವುದು ಒಳಿತು ಎಂಬುದು ಸ್ಥಳೀಯರ ಆಶಯವಾಗಿದೆ.

Leave a Reply

Your email address will not be published. Required fields are marked *