August 18, 2025
IMG_20240515_094936

ಹುಬ್ಬಳ್ಳಿ: ನೇಹಾ ಕೊಲೆಯಿಂದ ಇಡೀ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೇ ನೆತ್ತರನ್ನು ಹರಿಸಿದ್ದು ತಾನು ಪ್ರೀತಿಸಿದ ಯುವತಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಬುಧವಾರ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ನಡೆದಿದೆ.

ವೀರಾಪುರ ಓಣಿಯ 22 ವರ್ಷದ ಅಂಜಲಿ ಅಂಬಿಗೇರ ಎಂಬ ಯುವತಿಯೇ ಕೊಲೆಯಾಗಿದ್ದು ಕೊಲೆ ಮಾಡಿದ ಆರೋಪಿ ಈಕೆಯ ಪ್ರಿಯತಮ ವಿಶ್ವನಾಥ ಅಂತಾ ತಿಳಿದು ಬಂದಿದೆ. ಕಳೆದ 1 ವರ್ಷದಿಂದ ಇಬ್ಬರು ಕೂಡಾ ಪರಸ್ಪರ ಪ್ರೀತಿಯನ್ನು ಮಾಡುತ್ತಿದ್ದರು. ಆದ್ರೆ ಕಳೆದ ಒಂದು ವಾರದಿಂದ ಇಬ್ಬರ ನಡುವೆ ಕೆಲವು ವೈಯಕ್ತಿಕ ವಿಚಾರಕ್ಕೆ ಭಿನ್ನಾಭಿಪ್ರಾಯ ಬಂದಿತ್ತು ಎನ್ನಲಾಗುತ್ತಿದೆ.

ಹೀಗಾಗಿ ಇಂದು ಬೆಳಗಿನ ಜಾವ ವಿಶ್ವನಾಥ ಅಂಜಲಿ ವಾಸವಿದ್ದ ಮನೆಗೆ ಬಂದವನ್ನೇ ಮಲಗಿದ್ದ ಅಂಜಲಿ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ SP ಬ್ಯಾಕೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟಿನಲ್ಲಿ ಕಳೆದ ಹಲವು ದಿನಗಳಿಂದ ಹುಬ್ಬಳ್ಳಿಯಲ್ಲಿ ಕ್ರೈಂ ರೇಟ್ ಹೆಚ್ಚಳವಾಗುತ್ತಿದ್ದು ಅದರಲ್ಲೂ ಪ್ರೀತಿಯ ವಿಚಾರಕ್ಕೇ ಯುವತಿಯರ ಕೊಲೆ ಆಗುತ್ತಿರೋದು ಹುಬ್ಬಳ್ಳಿಯ ಜನತೆಯನ್ನು ಆತಂಕಕ್ಕೆ ಈಡು ಮಾಡಿದ್ದಂತೂ ಸುಳ್ಳಲ್ಲ.

Leave a Reply

Your email address will not be published. Required fields are marked *