ನವದೆಹಲಿ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಧರ್ಮ ಮತ್ತು ದೇವತೆಗಳ ಹೆಸರಿನಲ್ಲಿ ಮತ ಯಾಚಿಸಿರುವ ಪ್ರಧಾನ ಮಂತ್ರಿಯವರು ನೀಡಿದ ಭಾಷಣಕ್ಕೆ ಸಂಬಂಧಿಸಿದಂತೆ ಮಾಡಿದ ಮನವಿಯಲ್ಲಿ ನ್ಯಾಯಾಲಯವು ತನ್ನ ಈ ಆದೇಶವನ್ನು ಉಲ್ಲೇಖಿಸಿದೆ.
ಈ ಸಂಬಂಧ ಯಾವುದೇ ಪೂರ್ವಾಗ್ರಹವನ್ನು ಮಾಡುವುದು ನ್ಯಾಯಸಮ್ಮತವಲ್ಲ ಎಂದು ಹೈಕೋರ್ಟ್ ಹೇಳಿದೆ.
ಹೈಕೋರ್ಟ್ ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಮನವಿಗೆ ಅರ್ಹತೆಯ ಕೊರತೆಯಿದೆ. ಅವರ ಭಾಷಣವನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಟೀಕಿಸಲಾಗಿದೆ.ಅದಲ್ಲದೆ ಅರ್ಜಿದಾರರ ದೂರನ್ನು ಕಾನೂನಿನ ಪ್ರಕಾರ ಸ್ವತಂತ್ರವಾಗಿ ಮೌಲ್ಯಮಾಪನ ಮಾಡುವ ಅಧಿಕಾರವನ್ನು ಭಾರತದ ಚುನಾವಣಾ ಆಯೋಗ ಹೊಂದಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಅರ್ಜಿಯಲ್ಲಿ ಯಾವುದೇ ಅರ್ಹತೆಯನ್ನು ಕಂಡುಕೊಳ್ಳದ ಕಾರಣ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.