August 18, 2025
IMG-20240514-WA0016

ಹುಬ್ಬಳ್ಳಿ: ಗುರು ಅಸೋಸಿಯೇಟ್ಸ್ ಹಾಗೂ ಬಾಲಾಜಿ ವಧು-ವರರ ಮಾಹಿತಿ ಕೇಂದ್ರದ ವತಿಯಿಂದ 15 ನೇ ರಾಜ್ಯ ಮಟ್ಟದ ವೀರಶೈವ ಲಿಂಗಾಯಿತ ಮತ್ತು ಎಲ್ಲ ಒಳಪಂಗಡಗಳ ವಧು – ವರರ ಹಾಗೂ ಪಾಲಕರ ಪರಸ್ಪರ ಪರಿಚಯದ ಬೃಹತ್ ಸಮಾವೇಶವನ್ನು ಮೇ‌. 19 ರ ರವಿವಾರ ಬೆಳಗ್ಗೆ 10 ರಿಂದ 4 ರವರೆಗೆ ಆಯೋಜಿಸಲಾಗಿದೆ‌ ಎಂದು‌ ವ್ಯವಸ್ಥಾಪಕ ನಿರ್ದೇಶಕರುಗಳು ಡಿ.ಬಿ. ದುಂಡಪ್ಪನವರ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಪ್ರಕಾರ ವಿವಾಹ ಮಾಡುವ ಸದುದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದಲ್ಲಿ ಜಂಗಮ ಲಿಂಗಾಯತ, ಬಣಜಿಗ, ಪಂಚಮಸಾಲಿ, ಬಣಗಾರ, ಶಿವಶಿಂಪಿ, ನೇಕಾರ, ಕುರುವಿನಶೆಟ್ಟಿ ಸಾಧರು, ಗಾಣಿಗೇರ ಲಿಂಗಾಯತರೆಡ್ಡಿ, ಪಾಕನಕರೆಡ್ಡಿ, ಒಕ್ಕಲಿಗ, ಕುಡುವಕ್ಕಲಿಗ, ಹಡಪದ ಹಾಗೂ ಎಲ್ಲಾ ಒಳಪಂಗಡಗಳ ಒಳ್ಳೆಯ ಉನ್ನತ ಶಿಕ್ಷಣ , ಉನ್ನತ ವ್ಯಾಸಂಗ ಹೊಂದಿದ ಹಾಗೂ ಸರಕಾರಿ, ಅರೇ ಸರಕಾರಿ, ಬ್ಯಾಂಕ್‌ ಹಾಗೂ ಖಾಸಗಿ ಕಂಪನಿಯ ನೌಕರಸ್ಥರು, ಉದ್ಯಮದಾರರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಭಾಗವಹಿಸಲು ಇಚ್ಛಿಸುವವರು ಎರಡು ಫೋಟೊ, ಜಾತಕದೊಂದಿಗೆ ಭಾಗವಹಿಸಬಹುದು. ಹಾಗೂ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ 2ನೇ ನಂಬಂಧಕ್ಕಾಗಿ ವಿದೂರ ವಿಧವೆ ಹಾಗೂ ವಿಚ್ಚೆಧಿತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 7349451628, 7259662822 ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಹನುಮಂತಪ್ಪ ಎಚ್. ಎಸ್. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *