ಬೆಂಗಳೂರು: ಬೆಂಗಳೂರಿನ ಜವಳಿ ಉದ್ಯಮಿಯ ಮಗಳೊಬ್ಬರು ಪ್ರಿಯಕರನ ಜೊತೆ ಓಡಿಹೋಗಿದ್ದು, ಈ ವೇಳೆ ಮನೆಯಲ್ಲಿದ್ದ 1 ಕೋಟಿ ರೂಪಾಯಿ ನಗದನ್ನು ಕೂಡಾ ತೆಗೆದುಕೊಂಡು ಹೋಗಿದ್ದಾಳೆ.. ಈ ಬಗ್ಗೆ ಜವಳಿ ಉದ್ಯಮಿ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ..
ತಮ್ಮ ಪುತ್ರಿಗೆ ಇನ್ನೂ 19 ವರ್ಷ. ಆಕೆ 29 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಳು. ಆತನೊಂದಿಗೆ ಆಕೆ ಓಡಿಹೋಗಿದ್ದು, ಈ ಸಮಯದಲ್ಲಿ ಮನೆಯಲ್ಲಿಟ್ಟಿದ್ದ 1 ಕೋಟಿ ರೂಪಾಯಿ ನಗದು ಕೂಡಾ ತೆಗೆದುಕೊಂಡು ಹೋಗಿದ್ದಾಳೆ ಎಂದು ದೂರಿನಲ್ಲಿ ಉದ್ಯಮಿ ತಿಳಿಸಿದ್ದದಾರೆ..
ಏಪ್ರಿಲ್ 21ರಂದು ನೇತ್ರಾ ಮಲಗುವುದಕ್ಕಾಗಿ ತನ್ನ ಕೋಣೆಗೆ ಹೋಗಿದ್ದಳು.. ಬೆಳಗ್ಗೆ ನೋಡಿದರೆ ಆಕೆ ಕೋಣೆಯಲ್ಲಿ ಇರಲಿಲ್ಲ.. ಎಲ್ಲಿ ಹುಡುಕಿದರೂ ಆಕೆ ಪತ್ತೆಯಾಗಿಲ್ಲ.. ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ಹೋಗಿ ನೋಡಿದರೂ ಅಲ್ಲೂ ಆಕೆ ಇರಲಿಲ್ಲ.. ಸಹಪಾಠಿಗಳ ಮನೆಗಳಿಗೂ ಹೋಗಿಲ್ಲ.. ಹೀಗಾಗಿ ಉದ್ಯಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.. ಆಕೆ ಪ್ರಿಯಕರನ ಜೊತೆಗೇ ಓಡಿಹೋಗಿರಬಹುದು ಎಂದು ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ..
ಈ ನಡುವೆ ಓಡಿಹೋದವರು ಇಬ್ಬರೂ ಮದುವೆಯಾಗಿರುವುದು ಖಚಿತವಾಗಿದೆ.. ಅವರಿಬ್ಬರೂ ವಯಸ್ಸಿಗೆ ಬಂದವರಾದ್ದರಿಂದ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಆಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.. ಇನ್ನು ಮನೆಯಲ್ಲಿ ಕಾಣೆಯಾಗಿರುವ 1 ಕೋಟಿ ರೂಪಾಯಿ ಬಗ್ಗೆ ತನಿಖೆ ನಡೆಯುತ್ತಿದೆ..