ಹುಬ್ಬಳ್ಳಿ : ಬಿಸಿಲಿನ ಬೇಗೆಯಿಂದ ತತ್ತರಿಸಿ ಹೋಗಿದ್ದ ಹುಬ್ಬಳ್ಳಿ ಜನತೆಗೆ ನಿನ್ನೆಯ ದಿನ ವರುಣ ಆಶೀರ್ವಾದ ಮಾಡಿ ತಂಪೆರೆದನು ಆದ್ರೆ ಒಂದೇ ಸಮಯದಲ್ಲಿ ವರುಣರಾಯ ಸುರಿಸಿದ ರಭಸದ ಮಳೆಗೆ ಹುಬ್ಬಳ್ಳಿಯ ಜನತೆ ಹೈರಾಣಾಗಿ ಸಂಕಷ್ಟಕ್ಕೆ ಈಡಾಗಿದ್ದಾರೆ
ಸ್ಮಾರ್ಟ್ ಸಿಟಿ ಯೋಜನೆಯ ಅವ್ಯವಸ್ಥೆ, ಅರ್ಧಂಬರ್ಧ ಕಾಮಗಾರಿ ಹಾಗು ಸೂಕ್ತ ನಿರ್ವಹಣೆ ಇಲ್ಲದ ಕಾರಣಕ್ಕೆ ಮನೆಗಳಿಗೆ ನೀರು ಹೊಕ್ಕಿದೆ ಅಲ್ಲದೆ ಗಟಾರುಗಳು ನಿರ್ವಹಣೆ ಇಲ್ಲದೆ ಮಣ್ಣು ತುಂಬಿಕೊಂಡಿದ್ದರಿಂದ ರಸ್ತೆಯ ಮೇಲೆ ನೀರು ಹರಿದಿದೆ.ಇನ್ನು ಮುಂದುವರೆದು ಕೆಲ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ಹೊಕ್ಕು ಅವಾಂತರ ಸೃಷ್ಟಿ ಆಗಿದೆ
ಈ ಹಿನ್ನಲೆಯಲ್ಲಿ ಇಂದು ಮುಂಜಾನೆ ಖುದ್ದಾಗಿ ಕೆಪಿಸಿಸಿ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಹುಬ್ಬಳ್ಳಿಯ ವಿದ್ಯಾನಗರ,ಬೆಂಗೇರಿ, ಬಾರಕೋಟ್ರಿ ಗೋಕುಲ್ ರಸ್ತೆ ಸೇರಿದಂತೆ ವಿವಿಧ ಕಡೆ ಬೇಟಿ ನೀಡಿ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತವಾಗಿ ಕಾರ್ಯ ನಿರ್ವಹಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಅಲ್ಲದೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾದ ಕಾಮಗರಿಗಳಿಂದ ಜನರಿಗೆ ತೊಂದರೆ ಆಗದಂತೆ ನಿಗಾ ವಹಿಸುವಂತೆ ನಿರ್ದೇಶನ ನೀಡಿದ್ದಾರೆ
ಈ ಸಮಯದಲ್ಲಿ ಪಾಲಿಕೆ ಸದಸ್ಯರಾದ ಸೇಂದಿಲ್ ಕುಮಾರ್, ಸೋಮಲಿಂಗ್ ಯಲಿಗಾರ, ಕಿರಣ್ ಹಿರೇಮಠ,ಹಾಗು ಮೊಹಮ್ಮದ್ ಪಿಂಜಾರ ಹಾಜರಿದ್ದರು