ಧಾರವಾಡ: ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024 ರಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಒಟ್ಟು 18 ವಿಧಾರ್ಥಿಗಳಲ್ಲಿ 6 ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್, 12 ವಿಧ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕು. ಯಶಸ್ ಜೆ.ಎಸ್. ಶೇ. 93.44 ಪ್ರಥಮ, ಕು. ಚೇತನ ಹದ್ದನ್ನವರ ಶೇ. 93.12 ದ್ವೀತಿಯ, ಕು. ರಾಹುಲ್ ಹೇರೂರು ಶೇ. 90.88 ತೃತೀಯ, ಕು. ಮಿಥುನ ಬಿ ಶೇ. 89.6 ಚತುರ್ಥ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಶಾಲೆಗೆ ಮತ್ತು ಪೊಲೀಸ್ ಇಲಾಖೆಗೆ ಕೀರ್ತಿ ತಂದಿದ್ದಾರೆಂದು ಜಿಲ್ಲಾ ಪೋಲಿಸ್ ಅಧಿಕ್ಷಕರಿಂದ ಗೋಪಾಲ ಬ್ಯಾಕೋಡ್ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.
ರಾಜ್ಯ ಗೃಹ ಇಲಾಖೆಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಅಥವಾ ಸಿಬ್ಬಂದಿಯವರ ಮಕ್ಕಳು ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆ, ಧಾರವಾಡ ಇಲ್ಲಿ 2024-25 ಸಾಲಿಗೆ ಪ್ರವೇಶ ಪಡೆಯಬಹುದಾಗಿದ್ದು ಪ್ರವೇಶಕ್ಕಾಗಿ ಪ್ರಾಚಾರ್ಯರು ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆ, ಧಾರವಾಡ ಇವರನ್ನು ಸಂಪರ್ಕಿಸಬಹುದಾಗಿದೆ. ಪ್ರವೇಶ ಅರ್ಜಿ ಸಲ್ಲಿಸಲು ಮೇ-20 ಕೊನೆಯ ದಿನವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.