ಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ, ಸಂಪೂರ್ಣ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ ನನ್ನ ನಿಲುವು ಸ್ಪಷ್ಟವಿದೆ. ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಇನ್ನು, ಈ ಬಗ್ಗೆ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಆದರೆ ಇಲ್ಲಿಯವರೆಗೆ ಸರ್ಕಾರ ಯಾವುದೇ ರೀತಿ ಉತ್ತರ ಕೊಟ್ಟಿಲ್ಲ. 21 ನೇ ತಾರೀಖಿನಂದು ಪೆನ್‌ಡ್ರೈವ್ ಹೊರಗೆ ಬಂತು. ಹಾಸನ, ಮಂಡ್ಯ ಅಲ್ಲದೇ ಇಲ್ಲಿನ ಹುಬ್ಬಳ್ಳಿ ಧಾರವಾಡ ಹಳ್ಳಿಭಾಗದಲ್ಲಿ ಜನರು ವಿಡಿಯೋ ನೋಡಿದ್ದಾರೆ. ಆದ್ರೂ ಯಾಕೇ ಸರ್ಕಾರ ಕಣ್ಮುಚ್ಚಿ ಕುಳಿತಿತ್ತು. ಬೇಗನೇ ಎಫ್‌ಐಆರ್ ಮಾಡಲಿಲ್ಲ, ವಿದೇಶಕ್ಕೆ ಹೋಗೋದನ್ನ ತಡೆಯಲಿಲ್ಲ ಈ ಸರ್ಕಾರ ಇಂತಹ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿಲ್ಲ ಎಂದರು.
ರಾಜ್ಯ ಸರ್ಕಾರದ ಅಣತಿಯಂತೆ ತನಿಖೆ ಮಾಡಬೇಕು ಅಂತ ಎಸ್ ಐಟಿ ತೀರ್ಮಾಣ ಮಾಡಿದೆ. ಇದನ್ನ ನಾನು ಅತ್ಯಂತವಾಗಿ ಖಂಡಿಸ್ತೇನಿ ಸರ್ಕಾರದ ನಿರ್ಧಾರವನ್ನ, ರಾಜಕೀಯವಾಗಿ ಇದನ್ನ ಬಳಸಿಕೊಳ್ಳಲು ಸರ್ಕಾರ ತೀರ್ಮಾನ ಮಾಡಿರುವುದು ಮಹಿಳಾ ಕುಲಕ್ಕೆ ಅಪಮಾನ ಮಾಡಿದ ಹಾಗೇ, ನಾನೇನು ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ಒತ್ತಾಯ ಮಾಡುತ್ತಿಲ್ಲ. ಈ ಕೇಸ್‌ನ್ನ ಸಿಬಿಐಗೆ ವಹಿಸಲಿ ಸರಿಯಾಗಿ ತನಿಖೆ ನಡೆಯುತ್ತದೆ ಎಂದರು.
ನಮ್ಮ ಸರ್ಕಾರದ ಕಾಲದಲ್ಲಿ ಇಂತಹ ಪ್ರಕರಣಗಳು ನಡೆದಿಲ್ಲ ಹಾಗಾಗಿ ಸಿಬಿಐಗೆ ಕೊಡುವ ಪ್ರಶ್ನೆ ಬಂದಿಲ್ಲ. ಇವರ ಸರ್ಕಾರದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೆ ಇದ್ದಾವೆ. ಹಾಗಾಗಿ ಸಿಬಿಐ ಗೆ ಕೊಡಿ ಅಂತ ಕೇಳಿದ್ದೇವೆ. ನಿಮ್ಮ ಸರ್ಕಾರದ ಮಂತ್ರಿ ಕೃಷ್ಣ ಬೈರೇಗೌಡ್ರು ಹೇಳಿದ್ದಾರೆ. ಜಗತ್ತಿನ ಅತ್ಯಂತ ಲೈಂಗಿಕ ಶೋಷಣೆಯ ಹಗರಣ ಅಂತ ಹೇಳ್ತಿದ್ದಾರೆ. ಹಾಗಾದರೆ ಇದನ್ನು ಯಾಕೇ ನೀವು ಸಿಬಿಐಗೆ ಕೊಡುತ್ತಿಲ್ಲ. ರಾಜಕೀಯವಾಗಿ ಕೆಲವರನ್ನ ಮುಗಿಸಬೇಕು ಅಂತ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.