August 19, 2025
Picsart_24-05-05_06-02-00-976

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಹಸು ಕೂಸನ್ನು ಮಾರಾಟ ಮಾಡಲು ತಾವೇ ಒತ್ತಡ ಹಾಕಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.


ಬಾಣಂತಿ ತಾಯಿ ಹುಬ್ಬಳ್ಳಿಯ ಹೃದಯ ಭಾಗದ ಪ್ರತಿಷ್ಠಿತ ಹೆರಿಗೆ ಆಸ್ಪತ್ರೆಯಲ್ಲಿ ಇತ್ತೀಚಿಗೆ ಹೆರಿಗೆ ಮಾಡಿಸಿಕೊಂಡಿದ್ದರು. ಆದ್ರೆ ಆಸ್ಪತ್ರೆಯ ಬಿಲ್ ಹೆಚ್ಚಾಗಿದ್ದರಿಂದ ತತ್ತರಿಸಿ ಹೋಗಿದ್ದರಂತೆ ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಆಸ್ಪತ್ರೆಯ ವೈದ್ಯರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಮಗುವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಆಸ್ಪತ್ರೆಯ ಬಿಲ್ ಭರಿಸಿ ನಂತರ ಪೋಷಕರಿಗೂ ಸ್ವಲ್ಪ ಹಣ ನೀಡಬೇಕು ಎನ್ನುವ ಇರಾದೆ ಇಟ್ಟುಕೊಂಡಿದ್ದರು ಎಂದು ತಿಳಿದು ಬಂದಿದೆ.

ಈ ಗುಪ್ತ ವ್ಯವಹಾರದ ಮಾಹಿತಿ ತಿಳಿಯುತ್ತಿದ್ದಂತೆ ಬಿ ನ್ಯೂಸ್ ಸ್ಥಳಕ್ಕೆ ಕ್ಯಾಮೆರಾ ಸಮೇತ ಬೇಟಿ ನೀಡುತ್ತಿದ್ದಂತೆ ಅಧಿಕಾರಿಗಳು ಹಾಗೂ ಆಸ್ಪತ್ರೆ ಏಜೆಂಟರ ಸ್ಥಳದಿಂದ ಪರಾರಿಾಗಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಈ ಬಗ್ಗೆ ಪೋಷಕರೊಂದಿಗೆ ಸದ್ಯದಲ್ಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಿದ್ದು ತಪ್ಪಿತಸ್ಥರಿಗೆ ಸದ್ಯದಲ್ಲೇ ಬುದ್ದಿ ಬರಲಿದೆ ತ.ಜೊತೆಗೆ ಈ ಕೃತ್ಯಕ್ಕೆ ಕೈ ಹಾಕಿದ ಆಸ್ಪತ್ರೆಯವರಿಗೂ ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕ ಇದೆ ಎನ್ನುವುದು ಪೋಷಕರ ಆಗ್ರಹ.

Leave a Reply

Your email address will not be published. Required fields are marked *