ಧಾರವಾಡ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರು, ಹುಬ್ಬಳ್ಳಿ ಪಶ್ಚಿಮ ಕ್ಷೇತ್ರದ ಗಾಮನಗಟ್ಟಿಯ ವಿವಿಧ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.
ಪಾದಯಾತ್ರೆಯ ಉದ್ದಕ್ಕೂ ಸಾವಿರಾರು ಕಾರ್ಯಕರ್ತರು, ಮಹಿಳೆಯರು ಕಾಂಗ್ರೆಸ್ ಪರವಾದ ಘೋಷವಾಕ್ಯಗಳನ್ನು ಕೂಗುತ್ತಾ ಸಾಗಿದರು.
ಈ ಸಂದರ್ಭದಲ್ಲಿ ಇಸ್ಮಾಯಿಲ್ ತಮಟಗಾರ, ಹಣಮಂತ ಕೋರವಾರ, ಚನ್ನಪ್ಪ ಮಾಳಗಿ, ಕರಿಯಪ್ಪ ಬಿಸಗಲ್, ರಫೀಕ್ ಸಾವಂತನವರ, ಮಕ್ಬೂಲ್ ಸಾವಂತನವರ್ ಮತ್ತು ಪಕ್ಷದ ಮುಖಂಡರು, ಕ್ಷೇತ್ರದ ಹಿರಿಯರು, ಮಹಿಳೆಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.